ಕೊಡಗು ಜಿಲ್ಲಾಧಿಕಾರಿಗಳಿಗೆ ಬಿ.ಎಲ್.ಎ-2 ಪಟ್ಟಿ ಸಲ್ಲಿಕೆ

Apr 21, 2026 - 16:59
 0  223
ಕೊಡಗು ಜಿಲ್ಲಾಧಿಕಾರಿಗಳಿಗೆ ಬಿ.ಎಲ್.ಎ-2 ಪಟ್ಟಿ ಸಲ್ಲಿಕೆ

ಮಡಿಕೇರಿ;ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಕೊಡಗು ಜಿಲ್ಲಾಧಿಕಾರಿಗಳಾದ ಎಸ್.ಜೆ. ಸೋಮಶೇಖರ್ ( ಭಾ.ಆ.ಸೇ) ರವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ಪರಿಷ್ಕರಿಸಿ ಅಂತಿಮಗೊಳಿಸಿರುವ ಬಿ.ಎಲ್.ಎ-2 (ಬೂತ್ ಲೆವಲ್ ಏಜೆಂಟ್-2) ಪಟ್ಟಿಯನ್ನು ಇಂದು ಸಲ್ಲಿಸಲಾಯಿತು.

ಕೊಡಗು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರು ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾರವರು 208 ಮಡಿಕೇರಿ ವಿಧಾನ ಸಭಾ ಕ್ಷೇತ್ರ ಹಾಗೂ 209 ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಒಟ್ಟು 552 ಮತಗಟ್ಟೆಗಳ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ 2 ರವರ ವಿವರಗಳನ್ನು ಒಳಗೊಂಡು ಸಿದ್ದಪಡಿಸಿದ ಅಧಿಕೃತ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸಿದರು.

 ಕೇಂದ್ರ ಚುನಾವಣಾ ಆಯೋಗ ಪಾರದರ್ಶಕ ವಾಗಿ ಮತದಾರರ ಪಟ್ಟಿ ರಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಬಿ.ಎಲ್.ಎ ಯ ಬಳಕೆಗೆ ನಿರ್ದೇಶನವನ್ನು ನೀಡಿದ್ದು ಎಸ್.ಐ.ಆರ್ ಪ್ರಕೃಯಿಗಳಲ್ಲಿ ಸರ್ಕಾರಿ ಬಿ.ಎಲ್.ಒ ಗಳ ಜೊತೆಗೆ ರಾಜಕೀಯ ಪಕ್ಷಗಳ ಬಿ.ಎಲ್.ಎ ಗಳ ಜೊತೆ ಸಮನ್ವಯತೆಯಿಂದ ಬಳಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಶೇ 100 ರಷ್ಟು ಸಮರ್ಪಕವಾಗಿ ಎಸ್.ಐ.ಆರ್ ಪರಿಷ್ಕರಣೆಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0