ಜುಲೈ 19ರಂದು ವಿರಾಜಪೇಟೆಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ

Jul 13, 2026 - 18:42
 0  71
ಜುಲೈ 19ರಂದು ವಿರಾಜಪೇಟೆಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ

ವಿರಾಜಪೇಟೆ: ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಅನಾವರಣಗೊಳಿಸಲು ಮತ್ತು ಸೂಕ್ತ ವೇದಿಕೆ ಒದಗಿಸಲು ನೂತನ ಕ್ರೀಡಾ ಸಂಸ್ಥೆಯೊಂದು ವಿರಾಜಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಉತ್ಸವ ಜುಲೈ 19ರಂದು ಆಯೋಜಿಸಿದೆ.

 ಕ್ರೀಡಾಕೂಟದ ಬಗ್ಗೆ ಮಾತನಾಡಿದ ಕ್ರೀಡಾ ಆಯೋಜಕರಾದ ತಿರುಶ್, ಸಚಿನ್, ಇರ್ಷಾದ್ ಮತ್ತು ಸಂತೋಷ್ ಅವರುಗಳು ಚಾಂಪಿಯನ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ವಿರಾಜಪೇಟೆ ನಗರದಲ್ಲಿ ಜಿಲ್ಲೆಗೆ ಸೀಮಿತವಾದಂತೆ ವಿರಾಜಪೇಟೆ ನಗರದ ಚಿಕ್ಕಪೇಟೆ ಒಳಾಂಗಾಣ ಕ್ರೀಡಾಂಗಾಣದಲ್ಲಿ ಯು.ಬಿ.ಸಿ ಕೊಡಗು ಬ್ಯಾಡ್ಮಿಂಟನ್ ಫೀಸ್ಟ್ ತಾ.19 ರಂದು ನಡೆಯಲಿದೆ.

 ಕ್ರೀಡಾ ಉತ್ಸವದ ಆಯೋಜಕರಾದ ತಿರುಶ್ ಅವರು ಮಾತನಾಡಿ, ಪಂದ್ಯಾಟಗಳು ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಕ್ಷೇತ್ರಕ್ಕೆ ಒದಗಿಸುವ ನಿಟ್ಟಿನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕೀಡಾ ಉತ್ಸವನ್ನು ಆಯೋಜಿಸಲಾಗುತ್ತಿದೆ. ಕ್ರೀಡಾ ಉತ್ಸವ ಪುರುಷರ ವಿಭಾಗ ಓಪನ್ ಡಬಲ್ಸ್, ಮೆನ್ಸ್ ಬಿಗಿನೆರ್ಸ್ ಇಂಟರ್ಮಿಡೆಟ್, ಮೆನ್ಸ್ 35 ವರ್ಷ ಮೇಲ್ಪಟ್ಟು, ಮೆನ್ಸ್ 80 ವರ್ಷ ಮೇಲ್ಪಟ್ಟು ಮತ್ತು ಮಹಿಳಾ ವಿಭಾಗದಲ್ಲಿ ವುಮೇನ್ಸ್ ಡಬಲ್ಸ್ ವಿವಿಧ ವಿಭಾಗಗಳಲ್ಲಿ ಪಂದ್ಯಾಟಗಳು ನಡೆಯಲಿದೆ ಎಂದು ಹೇಳಿದರು.

ಆಯೋಜಕರಾದ ಸಚಿನ್ ಅವರು ಮಾತನಾಡಿ ಪಂದ್ಯಾಟದಲ್ಲಿ ವಿಜಯರಾದ ಕ್ರೀಡಾಪಟುಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುವುದು. ನೊಂದಾಯಿತ ತೀರ್ಪುಗಾರರು ಪಂದ್ಯಾಟದ ತೀರ್ಪು ನೀಡಲಿದ್ದಾರೆ.

ಪಂದ್ಯಾಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಭೋಜನ ಮತ್ತು ಸಂಜೆಯ ಉಪಹಾರ ಆಯೋಜಕರ ವತಿಯಿಂದ ಏರ್ಪಡಿಸಲಾಗಿದೆ. ಕ್ರೀಡಾ ಉತ್ಸವದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು 1000/-ನ್ನು ಮುಂಗಡವಾಗಿ ಪಾವತಿ ಮಾಡಬೇಕು.

ಕ್ರೀಡಾ ಕೂಟದಲ್ಲಿ ಭಾಗವಹಿಸಲು ಮತ್ತು ನೊಂದಾಯಿಸಲು 17-07-2026 ಕೊನೆ ದಿನವಾಗಿದೆ. ಕ್ರೀಡಾಕೂಟದ ಹೆಚ್ಚಿನ ಮಾಹಿತಿಗಾಗಿ ತಿರುಶ್ 9902267128 ಮತ್ತು ಸಚೀನ್ 6363616608 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸುವAತೆ ಅಯೋಜಕರು ಮನವಿ ಮಾಡಿದ್ದಾರೆ. ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0