ಬೈಲುಕೊಪ್ಪ:ಹಿಟ್ ಆ್ಯಂಡ್ ರನ್, ಯುವಕ ದುರ್ಮರಣ

ಬೈಲುಕೊಪ್ಪ:ಹಿಟ್ ಆ್ಯಂಡ್ ರನ್, ಯುವಕ ದುರ್ಮರಣ
ಮೃತಪಟ್ಟ ಯುವಕ

ಕುಶಾಲನಗರ, ಮಾ 28: ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಕಾರೊಂದು ಹಿಟ್ ಅಂಡ್ ರನ್ ನಡೆಸಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಬೈಲುಕೊಪ್ಪದ ಅನಿಲ್ ಮೃತ ಯುವಕ. ಕಾರೊಂದು ಮುಂದೆ ಚಲಿಸುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಎದುರಿನಲ್ಲಿ ಬೈಕಿನಲ್ಲಿ ಬರುತ್ತಿದ್ದ ಅನಿಲ್‌ ಮೈಮೇಲೆ ಆಟೋ ಹಾಗೂ ಕಾರು ಹರಿದ ಪರಿಣಾಮ ಅನಿಲ್‌ ಮೃತಪಟ್ಟಿದ್ದಾನೆ.