Kodagu

ಕೊಡಗಿನಲ್ಲಿ ಮರಳು, ಮರದ ದಿಮ್ಮಿಗಳ ಸಾಗಣೆ ನಿಷೇಧ ಆಗಸ್ಟ್‌ 17ವರೆಗೆ ವಿಸ್ತರಣೆ

admincoorgdaily

ಕೊಡಗಿನಲ್ಲಿ ಮರಳು, ಮರದ ದಿಮ್ಮಿಗಳ ಸಾಗಣೆ ನಿಷೇಧ ಆಗಸ್ಟ್‌ 17ವರೆಗೆ ವಿಸ್ತರಣೆ

ಮಡಿಕೇರಿ: ಮುಂಗಾರು ಮಳೆ ತೀವ್ರಗೊಂಡು ಜಿಲ್ಲೆಯಲ್ಲಿ ಭೂ ಕುಸಿತ ಮತ್ತು ರಸ್ತೆ ಹಾನಿಯ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರವನ್ನು ಆಗಸ್ಟ್ 17ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಸೋಮಶೇಖರ್.ಎಸ್.ಜೆ ಅವರು ಎಂಜೆ/ಆರ್‌ಟಿ/01/2026-27 ಸಂಖ್ಯೆಯ ಆದೇಶದ ಮೂಲಕ ಈ ನಿರ್ಬಂಧವನ್ನು ಜಾರಿಗೊಳಿಸಿದ್ದಾರೆ. ಈ ಆದೇಶವು ಆಗಸ್ಟ್ 7 ರಿಂದ ಆಗಸ್ಟ್ 17, 2026 ರವರೆಗೆ ಜಾರಿಯಲ್ಲಿರಲಿದೆ. ಈ ಹಿಂದೆ ಜೂನ್‌ 5ರಂದು ಹೊರಡಿಸಿದ್ದ ಆದೇಶದಂತೆ ಜುಲೈ 9ರವರೆಗೆ ಜಾರಿಯಲ್ಲಿದ್ದ ನಿಷೇಧವನ್ನು ಆಗಸ್ಟ್‌ 7ರವರೆಗೆ ವಿಸ್ತರಿಸಲಾಗಿತ್ತು. ಇದೀಗ 17ರವರೆಗೆ ವಿಸ್ತರಿಸಿ ಆದೇಶ ನೀಡಲಾಗಿದೆ.