ಮೇ.01 ರಿಂದ ಮೇ 03ರವರೆಗೆ ಬಾನಂಡ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ
admincoorgdaily

ಮಡಿಕೇರಿ: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ.೧ ರಿಂದ ಮೇ.೩ ರವರೆಗೆ ಬಾನಂಡ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್.ಪ್ರತ್ಯು ತಿಳಿಸಿದ್ದಾರೆ.
ಅಖಿಲ ಅಮ್ಮ ಕೊಡವ ಸಮಾಜ ಮತ್ತು ಬಾನಂಡ ಕುಟುಂಬಸ್ಥರ ಸಹಯೋಗದಲ್ಲಿ ಕ್ರೀಡಾಕೂಟ ನಡೆಯಲಿದೆ. ೬ ಓವರ್‌ನ ಪಂದ್ಯಾಟ ಇದಾಗಿದೆ. ಕ್ರೀಡಾಕೂಟದಲ್ಲಿ ೨೪ ತಂಡಗಳು ಪಾಲ್ಗೊಳ್ಳಲಿದೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಜಲ್ಲೆಯ ಶಾಸಕಧ್ವಯರು ಮತ್ತು ಸಂಸದ ಯಧವೀರ್ ಚಾಮರಾಜ ಕೃಷ್ಣದತ್ತ ಒಡೆಯರ್, ಎಂಎಲ್‌ಸಿ ಮಂಡೇಪಂಡ ಸುಜಾ ಕುಶಾಲಪ್ಪ, ಅರುಣ್ ಮಾಚಯ್ಯ, ಬಾನಂಡ ಕುಟುಂಬದ ಅಧ್ಯಕ್ಷ ಬಾನಂಡ.ಎಸ್.ರಮೇಶ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಾನಂಡ ಕುಟುಂಬದ ಪ್ರಮುಖರಾದ ಸೂದನ್, ಪ್ರಕಾಶ್, ಕೃಷಿರಾಜ್, ಜನಾರ್ಧನ ಇದ್ದರು.