ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು
ಪೊನ್ನಂಪೇಟೆ: ಬಾರ್ ಅಸೋಸಿಯೇಶನ್ ನಿಯೋಗವು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರನ್ನು ಭೇಟಿ ಮಾಡಿ, E-ಲೈಬ್ರರಿ ಸ್ಥಾಪಿಸಲು ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.
ಹುದಿಕೇರಿಯ ಕೊಣಗೇರಿಯಲ್ಲಿರುವ ಶಾಸಕರ ಮನೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ, ಪೊನ್ನಂಪೇಟೆ ಬಾರ್ ಅಸೋಸಿಯೇಶನ್ ವಕೀಲರು ಈ ಮನವಿಯನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಪೂರಕವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಎಂ.ಜಿ ರಾಕೇಶ್, ಕಾರ್ಯದರ್ಶಿ ಗಿರೀಶ್ ಅಣ್ಣಯ್ಯ, ಪದಾಧಿಕಾರಿಗಳಾದ ಎಂ.ಸಿ ಪೂವಣ್ಣ, ದೀಪಕ್, ಬಿ.ಎ ಸೋಮಣ್ಣ ಉಪಸ್ಥಿತರಿದ್ದರು.