ಬೆಳಗಾವಿ: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಮಹಿಳೆಯರಿಗೆ 12 ಕೋಟಿ ರೂ. ವಂಚನೆ; ಆರೋಪಿ ಪರಾರಿ

Oct 28, 2025 - 00:48
 0  275
ಬೆಳಗಾವಿ: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಮಹಿಳೆಯರಿಗೆ 12 ಕೋಟಿ ರೂ. ವಂಚನೆ;  ಆರೋಪಿ ಪರಾರಿ

ಬೆಳಗಾವಿ, ಅ. 27:ಮಹಿಳೆಯರಿಗೆ ಮನೆಯಿಂದಲೇ ಕೆಲಸ ನೀಡುವ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ “ವರ್ಕ್ ಫ್ರಂ ಹೋಮ್” (Work From Home) ಯೋಜನೆ ಹೆಸರಿನಲ್ಲಿ ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ವಸೂಲಿ ಮಾಡಿ ಪರಾರಿಯಾಗಿರುವುದು ಪತ್ತೆಯಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ಬಾಬಾಸಾಹೇಬ್ ಕೋಲೇಕರ್ ಎಂಬಾತ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡು, “ಅಗರಬತ್ತಿ ಪ್ಯಾಕಿಂಗ್ ಕೆಲಸ” ನೀಡುತ್ತೇನೆ ಎಂದು ನಂಬಿಸಿ ಮಹಿಳೆಯರನ್ನು ವಂಚಿಸಿದ್ದಾನೆ. ಪ್ರತಿ ಮಹಿಳೆಯಿಂದ ₹2,500 ರಿಂದ ₹5,000 ರವರೆಗೆ ಗುರುತಿನ ಚೀಟಿ ತಯಾರಿ, ನೋಂದಣಿ ಶುಲ್ಕ ಮತ್ತು ಆಟೋ ಬಾಡಿಗೆ ಮೊತ್ತದ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾನೆ.

ಈ ಯೋಜನೆ ಚೈನ್ ಮಾರ್ಕೆಟಿಂಗ್ (ಸರಪಳಿ ಮಾರ್ಕೆಟಿಂಗ್) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಮಹಿಳೆಗೆ ಇನ್ನಿಬ್ಬರನ್ನು ಸೇರಿಸುವಂತೆ ಸೂಚಿಸಲಾಗುತ್ತಿತ್ತು. ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರನ್ನು ಗುರಿಯಾಗಿಸಿಕೊಂಡು ಅವರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡಿರುವುದು ತಿಳಿದುಬಂದಿದೆ.

 “ಮನೆಯಲ್ಲಿ ಅಗರಬತ್ತಿ ಪ್ಯಾಕ್ ಮಾಡಿದರೆ ತಿಂಗಳಿಗೆ ₹2,500 ಗಳಿಸಬಹುದು. ಇತರರನ್ನು ಸೇರಿಸಿದರೆ ಆದಾಯ ಹೆಚ್ಚಾಗುತ್ತದೆ” ಎಂಬ ಆಮಿಷ ನೀಡಿ ವಂಚಕ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ. ಆದರೆ ಭರವಸೆ ನೀಡಿದ ವೇತನ ಸಿಕ್ಕದ ಕಾರಣ, ನೂರಾರು ಮಹಿಳೆಯರು ಬೆಳಗಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0