State News

ಬೆಂಗಳೂರು: ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ವೀರಗಲ್ಲನ್ನು ಲೋಕಾರ್ಪಣೆಗೊಳಿಸಿದ ಸಿ.ಎಂ ಸಿದ್ದರಾಮಯ್ಯ

admincoorgdaily

ಬೆಂಗಳೂರು:ಇಂದು ರಾಷ್ಟ್ರೀಯ ಸೈನಿಕ್ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಹೆಮ್ಮೆಯ ಸೈನಿಕರ ತ್ಯಾಗ - ಬಲಿದಾನದ ಸಂಕೇತವಾದ ವೀರಗಲ್ಲನ್ನು ಲೋಕಾರ್ಪಣೆಗೊಳಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ವಿವಿಧತೆಯಲ್ಲಿ ಏಕತೆ, ಬಹುತ್ವ ಸಂಸ್ಕೃತಿ ಈ ನೆಲದ ವೈಶಿಷ್ಟ್ಯ ಮಾತ್ರವಲ್ಲ, ಶಕ್ತಿಯೂ ಹೌದು. ಇದಕ್ಕಾಗಿ ಲಕ್ಷಾಂತರ ಜೀವಗಳು ತಮ್ಮ ಬದುಕು ಸಮರ್ಪಿಸಿವೆ. ಅವರೆಲ್ಲರ ಬಲಿದಾನ ವ್ಯರ್ಥವಾಗದಂತೆ ಭವ್ಯ ಭಾರತ ನಿರ್ಮಾಣಕ್ಕಾಗಿ ಶ್ರಮಿಸುವ ಹೊಣೆ ನಮ್ಮದಾಗಿದೆ ಎಂದರು‌. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.