ಬೆಂಗಳೂರು:ಆರನೇ ವರ್ಷದ ಕ್‌ಗ್ಗಟ್‌ನಾಡ್ ಕೊಡವ ಸಂಘದ ಒತ್ತೋರ್ಮೆ ಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

Jul 21, 2026 - 13:25
 0  98
ಬೆಂಗಳೂರು:ಆರನೇ ವರ್ಷದ ಕ್‌ಗ್ಗಟ್‌ನಾಡ್ ಕೊಡವ ಸಂಘದ ಒತ್ತೋರ್ಮೆ ಕೂಟದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಬೆಂಗಳೂರು:ಕೊಡವ ಸಮಾಜದ ‌ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಆಯೋಜಿಸಿದ ಆರನೇ ವರ್ಷದ ಕ್‌ಗ್ಗಟ್‌ನಾಡ್ ಕೊಡವ ಸಂಘ ಬೆಂಗಳೂರು ಇವರ (ಒತ್ತೋರ್ಮೆ ಕೂಟ) ಸಮ್ಮಿಲನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭಾಗವಹಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಕ್‌ಗ್ಗಟ್‌ನಾಡ್ ಕೊಡವ ಸಂಘದ ಏಳಿಗೆಗೆ ಪ್ರತಿಯೊಬ್ಬ ಸದಸ್ಯನು ಶ್ರಮಿಸಬೇಕು ಕ್‌ಗ್ಗಟ್‌ನಾಡ್ ಕೊಡವ ಸಂಘ ಹಾಗೂ ಅದರ ಸಂಘಟನೆ ಮತ್ತು ಆಚಾರ ವಿಚಾರ ಮತ್ತಷ್ಟು ಬೆಳೆಯಬೇಕೆಂದರೆ ಸಂಘಟನೆಯ ಹಾಗೂ ಸಮಾಜದ ಪ್ರತಿಯೊಬ್ಬರು ತಮ್ಮ ಕೊಡುಗೆಯನ್ನು ನೀಡಲೇಬೇಕು. ಆ ಮೂಲಕ ಕೊಡವ ಸಾಹಿತ್ಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಪ್ರತಿಯೊಬ್ಬರೂ ಶ್ರಮಿಸಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಮುದಾಯದ ಯುವ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳ ವಿಷಯವನ್ನು ಮನದಟ್ಟು ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಮ್ಮಿಲನ ಕೂಟಗಳು ಹಾಗೂ ವಿಚಾರ ವಿನಿಮಯ ಅತ್ಯಂತ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಐಆರ್ಎಸ್ ಉಪ ನಿರ್ದೇಶಕರು ಹಾಗೂ ಇಡಿ ಅಧಿಕಾರಿಗಳಾದ ಕೊಟ್ಟಂಗಡ ಡಾ ಪೆಮ್ಮಯ್ಯ, ಕಸ್ಟಮ್ ಹಾಗೂ ಜಿ ಎಸ್ ಟಿ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಚೊಟ್ಟೆಯಂಡಮಾಡ ಸತೀಶ್, ಕೊಡವ ಸಮಾಜದ ಅಧ್ಯಕ್ಷರಾದ ಚಿರಿಯಪಂಡ ಸುರೇಶ್ ನಂಜಪ್ಪ, ಕ್‌ಗ್ಗಟ್‌ನಾಡ್ ಕೊಡವ ಸಂಘದ ಅಧ್ಯಕ್ಷರಾದ ಮಂಡಚಂಡ ಸುರೇಶ್ ಪೂಣಚ್ಚ, ಉಪಾಧ್ಯಕ್ಷರು ತಿತೀರ ರೋಷನ್ ಅಪ್ಪಚ್ಚು, ಗೌರವ ಕಾರ್ಯದರ್ಶಿ ಮಲ್ಲೆಂಗಡ ಮಧು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಗುಡ್ಡಮಾಡ ಸದಾ ತಮ್ಮಯ್ಯ, ಖಜಾಂಚಿ ಮಾಚಿಮಾಡ ಕುಶಾಲಪ್ಪ, ಜಂಟಿ ಖಜಾಂಚಿ ಶರತ್ ಕುಶಾಲಪ್ಪ, ಸಂಘದ ಸದಸ್ಯರುಗಳು, ಬೆಂಗಳೂರುನಲ್ಲಿ ನೆಲೆಸಿರುವ ಕೊಡವ ಸದಸ್ಯರುಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0