ಬೆಂಗಳೂರು: 17 ಮನೆಗಳಿಗೆ ಕನ್ನ ಹಾಕಿದ ಕಳ್ಳ, ಪೊಲೀಸ್ ಬಲೆಗೆ; 70 ಲಕ್ಷ ಮೌಲ್ಯದ ವಸ್ತು

Dec 4, 2025 - 11:09
 0  759
ಬೆಂಗಳೂರು: 17 ಮನೆಗಳಿಗೆ ಕನ್ನ ಹಾಕಿದ ಕಳ್ಳ, ಪೊಲೀಸ್ ಬಲೆಗೆ; 70 ಲಕ್ಷ ಮೌಲ್ಯದ ವಸ್ತು
Photo credit: TV09

ಬೆಂಗಳೂರು, ಡಿ. 4: ನಗರದ ಕೆ.ಆರ್.ಪುರಂ ವಲಯದಲ್ಲಿ ಮೂರು ವರ್ಷಗಳಿಂದ ಮನೆಗಳ್ಳತನ ನಡೆಸಿ ಪೊಲೀಸರ ತಲೆನೋವಾಗಿದ್ದ ಆರೋಪಿ ಕೊನೆಗೂ ಸೆರೆ ಸಿಕ್ಕಿದ್ದಾನೆ. 

ಬರೋಬ್ಬರಿ 17 ಮನೆಗಳಿಗೆ ಕನ್ನ ಹಾಕಿದ ಮೊಹಮ್ಮದ್ ಇಸ್ರಾರ್ ಎಂಬಾತನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿ, ಅವನಿಂಧ ಸುಮಾರು ₹70 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 1.5 ಕೆ.ಜಿ. ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ತಡರಾತ್ರಿ ಮನೆಗಳಲ್ಲಿ ಕಳವು ಮಾಡುವ ಇಸ್ರಾರ್, ಗುರುತು ಪತ್ತೆಯಾಗದಂತೆ ಹಲವು ಚಾಣಾಕ್ಷ ಯುಕ್ತಿಗಳನ್ನು ಅನುಸರಿಸುತ್ತಿದ್ದ. ಕೃತ್ಯಕ್ಕೆ ಮೊದಲು ಹಾಗೂ ನಂತರ ಬಟ್ಟೆ ಬದಲಾಯಿಸುವುದು, ಕಳ್ಳತನ ಮಾಡಿದ ಬಳಿಕ ಬೈಕ್‌ನ ನಂಬರ್ ಪ್ಲೇಟ್ ಪರಿವರ್ತಿಸುವುದು, ಸಿಸಿಟಿವಿ ನಿಗಾವನ್ನು ತಪ್ಪಿಸಲು ಮಾರ್ಗ ಬದಲಿಸುವುದು ಮೊದಲಾದ ತಂತ್ರಗಳನ್ನು ಬಳಸಿ ಪೊಲೀಸರ ಕಣ್ಗಾವಲನ್ನು ತಪ್ಪಿಸಿಕೊಳ್ಳುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ನಗರದ ಪೂರ್ವ ವಲಯದಲ್ಲಿ ಒಂದರ ನಂತರ ಒಂದಾಗಿ ಸಂಭವಿಸುತ್ತಿದ್ದ ಮನೆಕಳ್ಳತನ ಪ್ರಕರಣಗಳು ಪೊಲೀಸರು ಎದುರಿಸಿದ್ದ ದೊಡ್ಡ ಸವಾಲಾಗಿತ್ತು. ವಿಶೇಷ ತಂಡ ರಚಿಸಿ ಕಳ್ಳನ ಚಲನವಲನಗಳನ್ನು ನಿಗಾದಲ್ಲಿ ಇಟ್ಟು, ಸಿಸಿಟಿವಿ ದೃಶ್ಯಾವಳಿಗಳ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಆರೋಪಿ ಇಸ್ರಾರ್‌ನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸರಣಿ ಕಳ್ಳತನಗಳಲ್ಲಿ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0