ಕೊಡವ ಭಾಷಾ ನಾಡ ಪೆದ ಆಶಾ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿ
ಮಡಿಕೇರಿ:ನಾಡ ಪೆದ ಆಶಾ ಕೊಡವ ಭಾಷಾ ಸಿನಿಮಾಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲ ಚಿತ್ರ ಪ್ರಶಸ್ತಿ ಲಭಿಸಿದೆ.
ನಾಡ ಪೆದ ಆಶಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಸೊಗಡನ್ನು ಸುಂದರವಾಗಿ ಬಿಂಬಿಸಿ ಕೊಡವ ಸಂಸ್ಕೃತಿ, ಉಡುಗೆ ತೊಡುಗೆ, ಸಂಪ್ರದಾಯ, ಆಚಾರ ವಿಚಾರಗಳನ್ನು ತೋರಿಸುವುದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ತನ್ನ ಸೈನಿಕ ಗಂಡನನ್ನು ಯುದ್ಧದಲ್ಲಿ ಕಳೆದುಕೊಂಡ ಬದುಕಿನ ಸುತ್ತ ನಡೆಯುವ ಕಹಿ ಘಟನೆಗಳನ್ನು ಸಹಿಸಿಕೊಂಡು ಅವಳು ತನ್ನ ಕರ್ತವ್ಯದ ನಡುವೆ ಮನೆ, ಕುಟುಂಬ ಜವಾಬ್ದಾರಿಯನ್ನು ನಿಭಾಯಿಸುವ ರೀತಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಕೊಡಗಿನ ಎಲ್ಲೆಡೆ LED ಪರದೆ ಮೇಲೆ 123 ಪ್ರದರ್ಶನ ಹಾಗೂ ವಿವಿಧ ಅಂತಾರಾಷ್ಟ್ರೀಯ ಸಿನಿಮಾೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ .7ನೇ ದೆಹರಡೂನ್, 2ನೇ ಚಂಡಿಗಡ್, 27ನೇ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ, ಮೈಸೂರು ದಸರಾ ಚಲನಚಿತ್ರೋತ್ಸವ-2022,ದಲ್ಲೂ, ಹುಬ್ಬಳ್ಳಿ ಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಸಿನಿಮಾೋತ್ಸವ 2022 ರಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದು, ಬೆಂಗಳೂರಿನ ಪನೋರಮ ಅಂತರಾಷ್ಟ್ರೀಯ ಸಿನಿಮೋತ್ಸವ ದಲ್ಲೂ "ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ" ಪ್ರಶಸ್ತಿ ಪಡೆದಿದ್ದು,ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಸಿನಿಮೋತ್ಸವ ದಲ್ಲಿ "ಬೆಸ್ಟ್ ಸೋಶಿಯಲ್ ಫಿಲಂ " ಪ್ರಶಸ್ತಿ ಸೇರಿದಂತೆ ಅಸ್ಸಾಂ, ಮಣಿಪುರ, ಇಂಪಾಲ, ಹೈದರಾಬಾದ್, ಮುಂಬೈ, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ರಾಜಸ್ತಾನ್, ಕೊಲ್ಕೋತಾ, ಯುಕೆ , ನೇಪಾಳ, ಯುರೋಪ್, ಬೆಲ್ಜಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಅತ್ಯುತ್ತಮ ನಟಿ ಪ್ರಶಸ್ತಿ, ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ , ಅತ್ಯುತ್ತಮ ಚಲನಚಿತ್ರ, ಉತ್ತಮ ಸಾಮಾಜಿಕ ಚಿತ್ರ, ಬೆಸ್ಟ್ ಫೀಚರ್ ಫಿಲಂ, ಉತ್ತಮ ಛಾಯಾಗ್ರಹಣ ಪ್ರಶಸ್ತಿ, ಉತ್ತಮ ಕಥೆ, ಹೀಗೆ ಸುಮಾರು 78 ವಿವಿಧ ವಿಭಾಗಗಳಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗಳನ್ನು ಪಡೆದು ಕೊಂಡು 201 ಪ್ರದರ್ಶನ ಕಂಡಿದೆ.