ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ :ಎರಡನೇ ದಿನದಾಟದ ವಿಜೇತ ತಂಡಗಳ ವಿವರ
ಮಡಿಕೇರಿ ಏ.4 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ಏ.4ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು.
ಮೈದಾನ 1; ಪೆರಿಯಂಡ ಮತ್ತು ಕಲ್ಲೇಂಗಡ (ನಾಪೋಕ್ಲು) ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಗಳಿಸಿ ಕಲ್ಲೇಂಗಡ ಜಯ ಸಾಧಿಸಿತು. ಪೆರಿಯಂಡ ತಂಡ 1 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.
ಪೂಲಂಡ ಮತ್ತು ಕಾಳಿಮಾಡ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು. ಪೂಲಂಡ ತಂಡ 6 ವಿಕೆಟ್ ಗಳನ್ನು ಕಳೆದುಕೊಂಡು 28 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಸಿದ್ದಂಡ ಮತ್ತು ನಂದೇಟಿರ ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿ ಸಿದ್ದಂಡ ಗೆಲುವು ಸಾಧಿಸಿತು. ನಂದೇಟಿರ 3 ವಿಕೆಟ್ ನಷ್ಟಕ್ಕೆ 60 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.
ಚಮ್ಮಟ್ಟಿರ ಮತ್ತು ಅಳ್ಮಚಂಡ ನಡುವಿನ ಪಂದ್ಯದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 118 ರನ್ ಗಳನ್ನು ಗಳಿಸಿ ಅಳ್ಮಚಂಡ ಗೆಲುವು ಸಾಧಿಸಿತು. ಚಮ್ಮಟ್ಟಿರ ತಂಡ 5 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿ ಸೋಲು ಕಂಡಿತು. ತೆನ್ನಿರ ಮತ್ತು ಮಳವಂಡ ನಡುವಿನ ಪಂದ್ಯದಲ್ಲಿ ತೆನ್ನಿರ ತಂಡ 6 ವಿಕೆಟ್ ನಷ್ಟಕ್ಕೆ 78 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು. ಮಳವಂಡ 4 ವಿಕೆಟ್ ನಷ್ಟಕ್ಕೆ 71 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ನಂಬಿಯಪಂಡ ಮತ್ತು ಮಾಚಿಮಂಡ ನಡುವಿನ ಪಂದ್ಯದಲ್ಲಿ ಮಾಚಿಮಂಡ ತಂಡ 6 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಗಳಿಸಿ ವಿಜಯ ಸಾಧಿಸಿತು. ನಂಬಿಯಪಂಡ 4 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು.
ಮಂಡುವಂಡ ಮತ್ತು ಕೀಕನಮಾಡ ನಡುವಿನ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ ಮಂಡುವಂಡ ತಂಡ ಗೆಲುವು ದಾಖಲಿಸಿತು. ಎದುರಾಳಿ ತಂಡ ಕೀಕನಮಾಡ 9 ವಿಕೆಟ್ ನಷ್ಟಕ್ಕೆ 5 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.
ಮೈದಾನ 2; ಚರಿಮಂಡ ಮತ್ತು ಚಪ್ಪಂಡ ನಡುವಿನ ಪಂದ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳನ್ನು ಸೇರಿಸಿ ಚರಿಮಂಡ ಜಯ ಸಾಧಿಸಿತು.
ಚಪ್ಪಂಡ ತಂಡ 5 ವಿಕೆಟ್ ನಷ್ಟಕ್ಕೆ 59 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು. ಪೋರಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ನಾಪಂಡ ತಂಡ 3 ವಿಕೆಟ್ ನಷ್ಟಕ್ಕೆ 68 ರನ್ ಗಳನ್ನು ಗಳಿಸಿ ಗೆಲುವು ದಾಖಲಿಸಿತು. ಪೋರಂಗಡ 3 ವಿಕೆಟ್ ನಷ್ಟಕ್ಕೆ 59 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.
ಬಲ್ಲಡಿಚಂಡ ಮತ್ತು ಸಾದೇರ ನಡುವಿನ ಪಂದ್ಯದಲ್ಲಿ ಬಲ್ಲಡಿಚಂಡ 3 ವಿಕೆಟ್ ನಷ್ಟಕ್ಕೆ 65 ರನ್ ಗಳನ್ನು ಗಳಿಸಿ ವಿಜಯ ಸಾಧಿಸಿತು. ಸಾದೇರ 4 ವಿಕೆಟ್ ನಷ್ಟಕ್ಕೆ 57 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಐಮುಡಿಯಂಡ ಮತ್ತು ಬಲ್ಲಿಮಾಡ ನಡುವಿನ ಪಂದ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 88 ರನ್ ಗಳನ್ನು ದಾಖಲಿಸಿ ಬಲ್ಲಿಮಾಡ ಗೆಲುವು ಸಾಧಿಸಿತು. ಐಮುಡಿಯಂಡ 1 ವಿಕೆಟ್ ನಷ್ಟಕ್ಕೆ 75 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ತಾತಪಂಡ ಮತ್ತು ಐಚಂಡ (ದೇವಣಗೇರಿ) ನಡುವಿನ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 52 ರನ್ ಗಳನ್ನು ಗಳಿಸಿ ಐಚಂಡ ಗೆಲುವು ಸಾಧಿಸಿತು.
ತಾತಪಂಡ 3 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಸೇರಿಸಿ ಸೋಲು ಕಂಡಿತು. ಚೇರಂಡ ಮತ್ತು ಮಲ್ಲಂಡ (ಬೇಗೂರು) ನಡುವಿನ ಪಂದ್ಯದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಚೇರಂಡ ತಂಡ 53 ರನ್ ದಾಖಲಿಸಿ ಗೆಲುವು ಸಾಧಿಸಿತು. ಮಲ್ಲಂಡ 5 ವಿಕೆಟ್ ನಷ್ಟಕ್ಕೆ 51 ರನ್ ದಾಖಲಿಸಿತು.