ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ಗೆಲುವು ಸಾಧಿಸಿದ ತಂಡಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ಗೆಲುವು ಸಾಧಿಸಿದ ತಂಡಗಳು

ಮಡಿಕೇರಿ ಏ.19 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.19 ರಂದು ಗೆಲುವು ಸಾಧಿಸಿದ ತಂಡಗಳು.

ಮೈದಾನ 1;(ಲಾಲು ಮುದ್ದಯ್ಯ ಮೈದಾನ)

ಕೂತಂಡ ಮತ್ತು ಅಪ್ಪುಮಣಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡಕ್ಕೆ 7 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಪ್ಪುಮಣಿಯಂಡ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 76 ರನ್ ಗಳನ್ನು ಗಳಿಸಿತು. ಕೂತಂಡ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು.

ಕಂಗಾoಡ ಮತ್ತು ಮಾದೆಯಂಡ (ಎಂ.ಬಾಡಗ) ನಡುವಿನ ಪಂದ್ಯದಲ್ಲಿ ಕಂಗಾoಡ ತಂಡ 10 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಾದೆಯಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಸೇರಿಸಿತು. ಕಂಗಾAಡ 4.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 68 ರನ್ ಗಳನ್ನು ಗಳಿಸಿ ಜಯ ಸಾಧಿಸಿತು.

ಮೂಕೊಂಡ ಮತ್ತು ಅಯ್ಯಲಾಪಂಡ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡಕ್ಕೆ 8 ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಯ್ಯಲಾಪಂಡ 6 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 58 ರನ್ ಗಳನ್ನು ಸೇರಿಸಿತು. ಮೂಕೊಂಡ 4.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಗಳಿಸಿ ಗೆಲುವು ಕಂಡಿತು.

ಮೈದಾನ 2;(ಎಸ್‌ಎಂಎಸ್, ಅರಮೇರಿ)

ಬೋವ್ವೇರಿಯಂಡ ಮತ್ತು ಮುಕ್ಕಾಟಿರ (ಕುಂಜಲಗೇರಿ) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ 11 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಸೇರಿಸಿತು. ಬೋವ್ವೇರಿಯಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಗಳಿಸಿ ಸೋಲು ಕಂಡಿತು.

ಮಾದೇಟಿರ ಮತ್ತು ಬೊಳ್ಳಚೆಟ್ಟಿರ ನಡುವಿನ ಪಂದ್ಯದಲ್ಲಿ ಬೊಳ್ಳಚೆಟ್ಟಿರ ತಂಡಕ್ಕೆ 90 ರನ್ ಗಳ ಭರ್ಜರಿ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೊಳ್ಳಚೆಟ್ಟಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಅಮೋಘ 136 ರನ್ ಗಳನ್ನು ಗಳಿಸಿತು. ಮಾದೇಟಿರ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.

ಅರಮಣಮಾಡ (ಬೇಗೂರು) ಮತ್ತು ಕರವಂಡ ನಡುವಿನ ಪಂದ್ಯದಲ್ಲಿ ಕರವಂಡ ತಂಡ 8 ವಿಕೆಟ್ ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅರಮಣಮಾಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಗಳಿಸಿತು. ಕರವಂಡ 4.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.

ಕೊಟ್ಟಂಗಡ ಮತ್ತು ತೀತಿರ (ಹುದಿಕೇರಿ) ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡಕ್ಕೆ 42 ರನ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಟ್ಟಂಗಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 88 ರನ್ ಗಳನ್ನು ಸೇರಿಸಿತು. ತೀತಿರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 46 ರನ್ ಗಳನ್ನು ಗಳಿಸಿ ಸೋಲು ಕಂಡಿತು.  

ಮುಂಡ್ಯೋಳoಡ ಮತ್ತು ಮಾಚೆಟ್ಟಿರ (ಬಾಳುಗೋಡು) ನಡುವಿನ ಹಣಾಹಣಿಯಲ್ಲಿ ಮಾಚೆಟ್ಟಿರ 9 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಡ್ಯೋಳAಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಗಳಿಸಿತು. ಮಾಚೆಟ್ಟಿರ 2.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.

ಸಣ್ಣುವಂಡ ಮತ್ತು ಬಡುಮಂಡ ನಡುವಿನ ಪಂದ್ಯದಲ್ಲಿ ಸಣ್ಣುವಂಡಕ್ಕೆ 10 ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಡುಮಂಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಸೇರಿಸಿತು. ಸಣ್ಣುವಂಡ 2.1 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 46 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.