ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.23 ರಂದು ಗೆಲುವು ಸಾಧಿಸಿದ ತಂಡಗಳು
ಮಡಿಕೇರಿ ಏ.23 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.23 ರಂದು ಗೆಲುವು ಸಾಧಿಸಿದ ತಂಡಗಳು.
ಮೈದಾನ 1(ಲಾಲು ಮುದ್ದಯ್ಯ ಮೈದಾನ);
ತಂಬುಕುತ್ತಿರ ಮತ್ತು ಚಿರಿಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ 26 ರನ್ ಗಳಿಂದ ತಂಬುಕುತ್ತಿರ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಬುಕುತ್ತಿರ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಸೇರಿಸಿತು. ಚಿರಿಯಪಂಡ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 48 ಗಳಿಸಿ ಸೋಲು ಅನುಭವಿಸಿತು.
ಕನ್ನಂಡ ಮತ್ತು ಕರಿನೆರವಂಡ ನಡುವಿನ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಕರಿನೆರವಂಡ ತಂಡ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರಿನೆರವಂಡ ತಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿತು. ಕನ್ನಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಸೇರಿಸಿ ಸಮಬಲ ಸಾಧಿಸಿತು. ಈ ಹಿನ್ನೆಲೆಯಲ್ಲಿ ನಡೆದ ಸೂಪರ್ ಓವರ್ ನಲ್ಲಿ ಕನ್ನಂಡ 2 ವಿಕೆಟ್ ನಷ್ಟಕ್ಕೆ 11 ರನ್ ಗಳನ್ನು ಗಳಿಸಿತು. ಕರಿನೆರವಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 12 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಅಮ್ಮಾಟಂಡ ಮತ್ತು ನಂದಿನೆರವoಡ ನಡುವಿನ ಪಂದ್ಯದಲ್ಲಿ ನಂದಿನೆರವAಡ ತಂಡಕ್ಕೆ 9 ವಿಕೆಟ್‌ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮ್ಮಾಟಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿತು. ನಂದಿನೆರವoಡ 4.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.
ಪೆಬ್ಬಟ್ಟಿರ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ದಾಸಂಡ 6 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪೆಬ್ಬಟ್ಟಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಗಳಿಸಿತು. ದಾಸಂಡ 5.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 67 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.
ಅಳಮೇಂಗಡ ಮತ್ತು ಚೊಟ್ಟೆಯಂಡಮಾಡ ನಡುವಿನ ಹಣಾಹಣಿಯಲ್ಲಿ ಅಳಮೇಂಗಡ ತಂಡ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೊಟ್ಟೆಯಂಡಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿತು. ಅಳಮೇಂಗಡ 5.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಗಳಿಸಿ ಗೆಲುವು ದಾಖಲಿಸಿತು.
ಮೈದಾನ 2(ಅರಮೇರಿ ಎಸ್‌ಎಂಎಸ್);
ಮುoಡoಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ಪುದಿಯೊಕ್ಕಡ ತಂಡಕ್ಕೆ 5 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಡoಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 64 ರನ್ ಗಳನ್ನು ಗಳಿಸಿತು. ಪುದಿಯೊಕ್ಕಡ 5.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 65 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.
ಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮೂಕೊಂಡ ನಡುವಿನ ಪಂದ್ಯದಲ್ಲಿ ಮೂಕೊಂಡ ತಂಡಕ್ಕೆ 26 ರನ್ ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೂಕೊಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 82 ರನ್ ಗಳನ್ನು ಸೇರಿಸಿತು. ಮುಕ್ಕಾಟಿರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನು ಗಳಿಸಿ ಸೋಲು ಕಂಡಿತು.
ಸಣ್ಣುವಂಡ ಮತ್ತು ಹಂಚೆಟ್ಟಿರ ನಡುವಿನ ಪಂದ್ಯದಲ್ಲಿ ಹಂಚೆಟ್ಟಿರ ತಂಡ 3 ರನ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಂಚೆಟ್ಟಿರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಗಳಿಸಿತು. ಸಣ್ಣುವಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.
ಕೊಟ್ಟಂಗಡ ಮತ್ತು ಕರವಂಡ ನಡುವಿನ ಪಂದ್ಯದಲ್ಲಿ ಕೊಟ್ಟಂಗಡ ತಂಡಕ್ಕೆ 34 ರನ್ ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಟ್ಟಂಗಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನು ಸೇರಿಸಿತು. ಕರವಂಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 22 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.
ಮುಕ್ಕಾಟಿರ(ಕುಂಬಳದಾಳು) ಮತ್ತು ಸಿದ್ದಂಡ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ 26 ರನ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 70 ರನ್ ಗಳನ್ನು ಗಳಿಸಿತು. ಸಿದ್ದಂಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.
ನೆರವಂಡ ಮತ್ತು ಬೊಳ್ಳೆರ ನಡುವಿನ ಪಂದ್ಯದಲ್ಲಿ ನೆರವಂಡ ತಂಡ 60 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆರವಂಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 108 ರನ್ ಗಳನ್ನು ಸೇರಿಸಿತು. ಬೊಳ್ಳೆರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 48 ರನ್ ಗಳನ್ನಷ್ಟೇ ಗಳಿಸಿ ಸೋಲು ಕಂಡಿತು.
ಮೈದಾನ 3 (ಮಹಿಳಾ ಕ್ರಿಕೆಟ್)ಸರಕಾರಿ ಪ್ರೌಢ ಶಾಲಾ ಮೈದಾನ;
ನಾಟೋಳಂಡ ಮತ್ತು ಮೇವಡ ನಡುವಿನ ಪಂದ್ಯದಲ್ಲಿ ಮೇವಡ ಗೆಲುವು ಸಾಧಿಸಿತು. ನಾಟೋಳಂಡ 5 ವಿಕೆಟ್ ನಷ್ಟಕ್ಕೆ 28 ರನ್ ಗಳನ್ನು ಗಳಿಸಿದರೆ, ಮೇವಡ ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಗಳನ್ನು ಸೇರಿಸಿ ವಿಜಯಿಯಾಯಿತು.
ಓಡಿಯಂಡ ಮತ್ತು ಮಂದನೆರವoಡ ನಡುವಿನ ಪಂದ್ಯದಲ್ಲಿ ಓಡಿಯಂಡ ಗೆಲುವು ದಾಖಲಿಸಿತು. ಓಡಿಯಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 88 ರನ್ ಗಳನ್ನು ಸೇರಿಸಿತು. ಮಂದನೆರವoಡ 3 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಓಡಿಯಂಡ ರೋಹಿಣಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದರು.
ಅರಮಣಮಾಡ ಮತ್ತು ಕಲಿಯಂಡ ನಡುವಿನ ಹಣಾಹಣಿಯಲ್ಲಿ ಅರಮಣಮಾಡ ಪಂದ್ಯವನ್ನು ಗೆದ್ದುಕೊಂಡಿತು. ಅರಮಣಮಾಡ 1 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಗಳಿಸಿತು. ಕಲಿಯಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 47 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.
ಕಾಣತಂಡ ಮತ್ತು ಮೂಕಳೇರ ನಡುವಿನ ಪಂದ್ಯದಲ್ಲಿ ಕಾಣತಂಡ ಗೆಲುವು ದಾಖಲಿಸಿತು. ಕಾಣತಂಡ 5 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಸೇರಿಸಿತು. ಮೂಕಳೇರ 3 ವಿಕೆಟ್ ನಷ್ಟಕ್ಕೆ 31 ರನ್ ಗಳನ್ನು ಗಳಿಸಿ ಸೋಲು ಕಂಡಿತು.
ಆದೇoಗಡ ಮತ್ತು ಅಜ್ಜಿಕುಟ್ಟಿರ ನಡುವಿನ ಪಂದ್ಯದಲ್ಲಿ ಆದೇಂಗಡ ಜಯ ಸಾಧಿಸಿತು. ಅಜ್ಜಿಕುಟ್ಟಿರ 2 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನು ಗಳಿಸಿತು. ಆದೇಂಗಡ 1 ವಿಕೆಟ್ ನಷ್ಟಕ್ಕೆ 57 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು.
ನೆಲ್ಲಿರ ಮತ್ತು ಮಣವಟ್ಟಿರ ನಡುವಿನ ಪಂದ್ಯದಲ್ಲಿ ಮಣವಟ್ಟಿರ ಗೆಲುವಿನ ನಗು ಬೀರಿತು. ಮಣವಟ್ಟಿರ ಯಾವುದೇ ವಿಕೆಟ್ ನಷ್ಟವಿಲ್ಲದೆ 66 ರನ್ ಗಳನ್ನು ಸೇರಿಸಿತು. ನೆಲ್ಲಿರ 6 ವಿಕೆಟ್ ನಷ್ಟಕ್ಕೆ ಕೇವಲ 19 ರನ್ ಗಳಿಸಿ ಸೋಲೊಪ್ಪಿಕೊಂಡಿತು.
