ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ : ಏ.27 ರಂದು ಗೆಲುವು ಸಾಧಿಸಿದ ತಂಡಗಳು

Apr 27, 2026 - 19:11
 0  192
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ : ಏ.27 ರಂದು ಗೆಲುವು ಸಾಧಿಸಿದ ತಂಡಗಳು

ಮಡಿಕೇರಿ ಏ.27 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.27 ರಂದು ಪುರುಷರ ಪ್ರೀ-ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿದ ತಂಡಗಳು

ಮೈದಾನ 1 (ಲಾಲು ಮುದ್ದಯ್ಯ ಮೈದಾನ);

ಮಂಡುವoಡ ಮತ್ತು ಮಲ್ಲಜ್ಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಜ್ಜಿರ ತಂಡಕ್ಕೆ 12 ರನ್ ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಲ್ಲಜ್ಜಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 63 ರನ್ ಗಳನ್ನು ಸೇರಿಸಿತು. ಮಂಡುವoಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಗಳಿಸಿ ಸೋಲು ಕಂಡಿತು. ಮಲ್ಲಜ್ಜಿರ ರೋಷನ್ 48 ರನ್ ಗಳನ್ನು ಸೇರಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಮಂಡುವoಡ ದುಷ್ಯಂತ್ 17 ರನ್ ಗಳನ್ನು ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮಲ್ಲಜ್ಜಿರ ಪರ ಜಗನ್ 3 ವಿಕೆಟ್ ಪಡೆದರು.

ಬೊಟ್ಟಂಗಡ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಚೆಕ್ಕೇರ ತಂಡಕ್ಕೆ 6 ವಿಕೆಟ್ ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೊಟ್ಟಂಗಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಗಳಿಸಿತು. ಚೆಕ್ಕೇರ 5.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಸೇರಿಸಿ ಗೆಲುವು ಸಾಧಿಸಿತು. ಚೆಕ್ಕೇರ ಪರ ಶಾನ್ 5 ವಿಕೆಟ್ ಗಳನ್ನು ಪಡೆದರು. ಬೊಟ್ಟಂಗಡ ಪ್ರಥು 26 ರನ್ ಗಳನ್ನು ಸೇರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಬೊಳಕಾರಂಡ (ಕೊಣಂಜಗೇರಿ) ಮತ್ತು ಮೋಟನಾಳಿರ ನಡುವಿನ ಪಂದ್ಯದಲ್ಲಿ ಮೋಟನಾಳಿರ ತಂಡ 21 ರನ್ ಗಳಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೋಟನಾಳಿರ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 64 ರನ್ ಗಳನ್ನು ಗಳಿಸಿತು. ಬೊಳಕಾರಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು. ಮೋಟನಾಳಿರ ಶರತ್ 28 ರನ್ ಗಳನ್ನು ಸೇರಿಸಿದರು. ಬೊಳಕಾರಂಡ ಪರ 2 ವಿಕೆಟ್ ಕಬಳಿಸಿದ ದರ್ಶನ್ 20 ರನ್ ಗಳನ್ನು ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕೋಳೆರ ಮತ್ತು ಪಂದ್ಯoಡ ನಡುವಿನ ಪಂದ್ಯದಲ್ಲಿ ಪಂದ್ಯoಡ 9 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಳೆರ 6 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಸೇರಿಸಿತು. ಪಂದ್ಯoಡ 3.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 45 ರನ್ ಗಳನ್ನು ಗಳಿಸಿ ಜಯ ಕಂಡಿತು. ಕೋಳೆರ 17 ರನ್ ಗಳನ್ನು ದಾಖಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯoಡ ಪರ ಅಯ್ಯಪ್ಪ 4 ವಿಕೆಟ್ ಗಳನ್ನು ಪಡೆದರು. ಪಂದ್ಯoಡ ದಿಲನ್ 34 ರನ್ ಗಳನ್ನು ಸೇರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0