ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರ ವಿಜೇತ ತಂಡಗಳು

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರ ವಿಜೇತ ತಂಡಗಳು

ಮಡಿಕೇರಿ ಏ.21 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.21 ರ ವಿಜೇತ ತಂಡಗಳು.

ಮೈದಾನ 1 (ಲಾಲು ಮುದ್ದಯ್ಯ ಮೈದಾನ);

ಕಲಿಯಂಡ ಮತ್ತು ಪುದಿಯೊಕ್ಕಡ ತಂಡಗಳ ನಡುವಿನ ಪಂದ್ಯವನ್ನು ಪುದಿಯೊಕ್ಕಡ 43 ರನ್ ಗಳಿಂದ ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುದಿಯೊಕ್ಕಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಸೇರಿಸಿತು. ಕಲಿಯಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 36 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.

ತೆಕ್ಕಡ ಮತ್ತು ಕರಿನೆರವಂಡ ನಡುವಿನ ಪಂದ್ಯದಲ್ಲಿ ಕರಿನೆರವಂಡ 8 ವಿಕೆಟ್ ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತೆಕ್ಕಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿತು. ಕರಿನೆರವಂಡ 4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿ ಗೆಲುವು ಸಾಧಿಸಿತು.

ನಂದಿನೆರವoಡ ಮತ್ತು ಮಂದತoಡ ನಡುವಿನ ಪಂದ್ಯದಲ್ಲಿ ನಂದಿನೆರವoಡ 9 ವಿಕೆಟ್ ಗಳಿಂದ ಗೆಲುವು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂದತoಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 39 ರನ್ ಗಳನ್ನು ಸೇರಿಸಿತು. ನಂದಿನೆರವoಡ 3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 40 ರನ್ ಗಳನ್ನು ಗಳಿಸಿ ಜಯ ಸಾಧಿಸಿತು.

ಕಂಬೀರoಡ ಮತ್ತು ಅಮ್ಮಾಟಂಡ ನಡುವಿನ ಹಣಾಹಣಿಯಲ್ಲಿ ಅಮ್ಮಾಟಂಡ 5 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಂಬೀರoಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 46 ರನ್ ಗಳನ್ನು ಗಳಿಸಿತು. ಅಮ್ಮಾಟಂಡ 5.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು.

ನoದಿರ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ದಾಸಂಡ 24 ರನ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಾಸಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 66 ರನ್ ಗಳನ್ನು ಗಳಿಸಿತು. ನಂದಿರ 6 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 42 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.

ಬೊಟ್ಟoಗಡ ಮತ್ತು ಕಾಂಡೆರ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ ತಂಡ 10 ವಿಕೆಟ್ ಗಳಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾಂಡೆರ 6 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 31 ರನ್ ಗಳನ್ನು ಸೇರಿಸಿತು. ಬೊಟ್ಟಂಗಡ 2.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 36 ರನ್ ಗಳನ್ನು ಗಳಿಸಿ ಗೆಲುವು ಕಂಡಿತು.

ಕಾಣತoಡ ಮತ್ತು ಬೊಳಕಾರಂಡ (ಕುಂಜಿಲಗೇರಿ) ನಡುವಿನ ಪಂದ್ಯದಲ್ಲಿ ಬೊಳಕಾರಂಡ 2 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೊಳಕಾರಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಗಳಿಸಿತು. ಕಾಣತಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.

ಮೈದಾನ 2 (ಅರಮೇರಿ ಎಸ್‌ಎಂಎಸ್);

ಚೊಟ್ಟೆಯoಡಮಾಡ ಮತ್ತು ಪಾಲಂದಿರ (ಬಲಂಬೆರಿ) ನಡುವಿನ ಪಂದ್ಯದಲ್ಲಿ ಚೊಟ್ಟೆಯಂಡಮಾಡ 6 ವಿಕೆಟ್ ಗಳ ಜಯ ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಲಂದಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 37 ರನ್ ಗಳನ್ನು ಗಳಿಸಿತು. ಚೊಟ್ಟೆಯಂಡಮಾಡ 4.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಸೇರಿಸಿ ಗೆಲುವು ಸಾಧಿಸಿತು.

ಮೊಣ್ಣಂಡ ಮತ್ತು ಅಳಮೇಂಗಡ ನಡುವಿನ ಪಂದ್ಯದಲ್ಲಿ ಅಳಮೇಂಗಡ ತಂಡಕ್ಕೆ 5 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮೊಣ್ಣಂಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 38 ರನ್ ಗಳನ್ನು ಸೇರಿಸಿತು. ಅಳಮೇಂಗಡ 4.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 39 ರನ್ ಗಳನ್ನು ಗಳಿಸಿ ಗೆಲುವು ಕಂಡಿತು.

ಮುoಡoಡ ಮತ್ತು ಅಜ್ಜಿಕುಟ್ಟಿರ ನಡುವಿನ ಪಂದ್ಯದಲ್ಲಿ ಮುಂಡoಡ ತಂಡಕ್ಕೆ 26 ರನ್ ಗಳ ಗೆಲುವು ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಡoಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 60 ರನ್ ಗಳನ್ನು ಗಳಿಸಿತು. ಅಜ್ಜಿಕುಟ್ಟಿರ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 34 ರನ್ ಗಳನ್ನಷ್ಟೇ ಸೇರಿಸಿ ಸೋಲು ಕಂಡಿತು.

ಹoಚೆಟ್ಟಿರ ಮತ್ತು ಕೈಬಿಲಿರ ನಡುವಿನ ಪಂದ್ಯದಲ್ಲಿ ಹಂಚೆಟ್ಟಿರ ತಂಡಕ್ಕೆ 23 ರನ್ ಗಳ ಜಯ ದೊರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಂಚೆಟ್ಟಿರ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿತು. ಕೈಬಿಲಿರ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.

ಚಾಮೆರ ಮತ್ತು ಅಜ್ಜೆಟ್ಟಿರ ನಡುವಿನ ಪಂದ್ಯದಲ್ಲಿ ಅಜ್ಜೆಟ್ಟಿರ 47 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಜ್ಜೆಟ್ಟಿರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 127 ರನ್ ಗಳನ್ನು ಗಳಿಸಿತು. ಚಾಮೆರ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್ ಗಳನ್ನು ಸೇರಿಸಿ ಸೋಲು ಕಂಡಿತು.

ಮಹಿಳಾ ಕ್ರಿಕೆಟ್ ಮೈದಾನ 3 ಸರಕಾರಿ ಪ್ರೌಢ ಶಾಲಾ ಮೈದಾನ;

ಮೇರಿಯಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡಕ್ಕೆ 25 ರನ್ ಗಳ ಜಯ ಲಭಿಸಿತು. ಕಲಿಯಂಡ 5 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 59 ರನ್ ಗಳನ್ನು ಗಳಿಸಿತು. ಮೇರಿಯಂಡ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 34 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.

ಮೂಕಳೆರ ಮತ್ತು ಮುಕ್ಕಾಟಿರ (ಪುಲಿಕೋಟ್) ನಡುವಿನ ಹಣಾಹಣಿಯಲ್ಲ್ಲಿ ಮೂಕಳೆರ 9 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮುಕ್ಕಾಟಿರ 5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಗಳನ್ನು ಸೇರಿಸಿತು. ಮೂಕಳೆರ 3.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 26 ರನ್ ಗಳನ್ನು ಗಳಿಸಿ ಗೆಲುವು ಕಂಡಿತು.

ತಾಚಮಂಡ ಮತ್ತು ಕಾನತಂಡ ನಡುವಿನ ಪಂದ್ಯದಲ್ಲಿ ಕಾನತಂಡ ತಂಡಕ್ಕೆ 13 ರನ್ ಗಳ ಜಯ ಲಭಿಸಿತು. ಕಾನತಂಡ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿತು. ತಾಚಮಂಡ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿ ಸೋಲು ಕಂಡಿತು.

ಕಡೆಮಾಡ ಮತ್ತು ಆದೇಂಗಡ ನಡುವಿನ ಪಂದ್ಯದಲ್ಲಿ ಆದೇಂಗಡ 10 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಕಡೆಮಾಡ 5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 39 ರನ್ ಗಳನ್ನು ಸೇರಿಸಿತು. ಆದೇಂಗಡ 5 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಲ್ಲದೆ 40 ರನ್ ಗಳನ್ನು ಗಳಿಸಿ ಜಯ ಕಂಡಿತು.

ನಡಿಕೇರಿಯoಡ ಮತ್ತು ಮಣವಟ್ಟಿರ ನಡುವಿನ ಪಂದ್ಯದಲ್ಲಿ ಮಣವಟ್ಟಿರ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ನಡಿಕೇರಿಯಂಡ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 32 ರನ್ ಗಳನ್ನು ಗಳಿಸಿತು. ಮಣವಟ್ಟಿರ 3.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 33 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು.