ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸಿದ ತಂಡಗಳ ವಿವರ
ಮಡಿಕೇರಿ ಏ.29 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.29 ರಂದು ಸೆಮಿಫೈನಲ್ಸ್ ನಲ್ಲಿ ಗೆಲುವು ಸಾಧಿಸಿದ ತಂಡಗಳು
ಮೈದಾನ 1 ಪುರುಷರ ಕ್ರಿಕೆಟ್ (ಲಾಲು ಮುದ್ದಯ್ಯ ಮೈದಾನ);
ಚೆಕ್ಕೇರ ಮತ್ತು ಪಂದ್ಯoಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೇರ 29 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆಕ್ಕೇರ 8 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಗಳನ್ನು ಸೇರಿಸಿತು. ಪಂದ್ಯoಡ 8 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿ ಸೋಲು ಕಂಡಿತು. ಚೆಕ್ಕೇರ ಕಾರ್ಯಪ್ಪ 47 ರನ್ ಗಳನ್ನು ಸೇರಿಸಿ 2 ವಿಕೆಟ್ ಗಳನ್ನು ಕಬಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಪಂದ್ಯoಡ ದಿಲನ್ 19 ರನ್ ಗಳನ್ನು ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮಾಳೇಟಿರ (ಕೆದಮುಳ್ಳೂರು) ಮತ್ತು ಪಾರುವಂಡ ನಡುವಿನ ಪಂದ್ಯದಲ್ಲಿ ಮಾಳೇಟಿರ 38 ರನ್ ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಾಳೇಟಿರ 8 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿತು. ಪಾರುವಂಡ 7.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 49 ರನ್ ಗಳನ್ನಷ್ಟೇ ಸೇರಿಸಿ ಸೋಲು ಅನುಭವಿಸಿತು. ಪಾರುವಂಡ ಪ್ರಿನ್ಸ್ 16 ರನ್ ಗಳನ್ನು ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮಾಳೇಟಿರ ರಾಣೆ 4 ವಿಕೆಟ್ ಗಳನ್ನು ಪಡೆದು 43 ರನ್ ಗಳನ್ನು ಸೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಹಿಳೆಯರ ಕ್ರಿಕೆಟ್;
ಅರಮಣಮಾಡ ಮತ್ತು ಮಣವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮಣವಟ್ಟಿರ 30 ರನ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಣವಟ್ಟಿರ ತಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಗಳಿಸಿತು. ಅರಮಣಮಾಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಗಳನ್ನು ಮಾತ್ರ ಸೇರಿಸಿ ಸೋಲೊಪ್ಪಿಕೊಂಡಿತು. ಮಣವಟ್ಟಿರ ಅರ್ಪಿತಾ 21 ರನ್ ಗಳನ್ನು ಗಳಿಸಿದರು. ಅರಮಣಮಾಡ ದರ್ಶಿನಿ 1 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು.
ಮುಕ್ಕಾಟಿರ (ಬೆಳ್ಳೂರು - ಹರಿಹರ) ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ 23 ರನ್ ಗಳಿಂದ ವಿಜಯಿಯಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಕ್ಕಾಟಿರ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 54 ರನ್ ಗಳನ್ನು ಸೇರಿಸಿತು. ಚೆಕ್ಕೇರ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 31 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಚೆಕ್ಕೇರ ಸುಮನ್ 11 ರನ್ ಗಳನ್ನು ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಕ್ಕಾಟಿರ ಅಂಜನಾ 27 ರನ್ ಗಳನ್ನು ಸೇರಿಸಿದರು.