ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.20 ರಂದು ಗೆಲುವು ಸಾಧಿಸಿದ ಮಹಿಳಾ ತಂಡಗಳ ವಿವರ
ಮಡಿಕೇರಿ ಏ.20 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.20 ರಂದು ಗೆಲುವು ಸಾಧಿಸಿದ ತಂಡಗಳು.
ಮೈದಾನ 3 ಮಹಿಳಾ ಕ್ರಿಕೆಟ್ (ಸರಕಾರಿ ಪ್ರೌಢ ಶಾಲಾ ಮೈದಾನ);
ಮಲಚ್ಚೀರ ಮತ್ತು ಕಟ್ಟೆರ (ಅರಮೇರಿ) ತಂಡಗಳ ನಡುವಿನ ಪಂದ್ಯದಲ್ಲಿ ಕಟ್ಟೆರ 30 ರನ್ ಗಳ ಜಯ ಸಾಧಿಸಿತು. ಕಟ್ಟೆರ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿತು. ಮಲಚ್ಚೀರ 5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 25 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.
ಮಾಚಿಮಂಡ ಮತ್ತು ಕೊಕ್ಕೆಂಗಡ ನಡುವಿನ ಪಂದ್ಯದಲ್ಲಿ ಮಾಚಿಮಂಡ ತಂಡ 62 ರನ್ ಗಳಿಂದ ಗೆಲುವು ಸಾಧಿಸಿತು. ಮಾಚಿಮಂಡ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿತು. ಕೊಕ್ಕೆಂಗಡ 5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 25 ರನ್ ಗಳನ್ನಷ್ಟೇ ಸೇರಿಸಿ ಸೋಲು ಕಂಡಿತು.
ಅಚ್ಚಪ್ಪAಡ ಮತ್ತು ಚೇಂದಿರ ನಡುವಿನ ಪಂದ್ಯದಲ್ಲಿ ಅಚ್ಚಪ್ಪಂಡ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ಚೇಂದಿರ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 35 ರನ್ ಗಳನ್ನು ಸೇರಿಸಿತು. ಅಚ್ಚಪ್ಪಂಡ 4.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 37 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು.
ಮೀದೇರಿರ ಮತ್ತು ಮುಕ್ಕಾಟಿರ (ಮೂವತ್ತೊಕ್ಲು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ 10 ವಿಕೆಟ್ ಗಳ ಜಯ ಸಾಧಿಸಿತು. ಮೀದೇರಿರ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 35 ರನ್ ಗಳನ್ನು ಗಳಿಸಿತು. ಮುಕ್ಕಾಟಿರ ತಂಡ 4.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 38 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಕುಪ್ಪಣ್ಣಮಾಡ ಮತ್ತು ಮಂದನೆರವAಡ ನಡುವಿನ ಪಂದ್ಯದಲ್ಲಿ ಮಂದನೆರವAಡ ತಂಡ 10 ವಿಕೆಟ್ ಗಳ ಜಯ ಕಂಡಿತು. ಮಂದನೆರವAಡ 5 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 61 ರನ್ ಗಳನ್ನು ಗಳಿಸಿತು. ಕುಪ್ಪಣ್ಣಮಾಡ 5 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 46 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.
ಅರಮಣಮಾಡ (ಬೆಸಗೂರು) ಮತ್ತು ಕಟ್ಟೇರ ನಡುವಿನ ಹಣಾಹಣಿಯಲ್ಲಿ ಅರಮಣಮಾಡ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಕಟ್ಟೇರ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 22 ರನ್ ಗಳನ್ನು ಸೇರಿಸಿತು. ಅರಮಣಮಾಡ 3.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 23 ರನ್ ಗಳನ್ನು ಗಳಿಸಿ ಜಯ ಸಾಧಿಸಿತು.