ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ;ಇಂದಿನ ಪಂದ್ಯಗಳ ವಿಜೇತ ತಂಡಗಳ ವಿವರ

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ;ಇಂದಿನ ಪಂದ್ಯಗಳ  ವಿಜೇತ ತಂಡಗಳ ವಿವರ

ಮಡಿಕೇರಿ ಏ.6 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ಏ.6ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು.

ಮೈದಾನ 1;

ಕಾಂಚೇರಿರ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡಕ್ಕೆ 6 ವಿಕೆಟ್‌ಗಳ ಜಯ ಲಭಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕಾಂಚೇರಿರ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಗಳಿಸಿತು. ಕಲಿಯಂಡ ತಂಡ 5.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು. 

ಮೇದುರ ಮತ್ತು ಬಾಳೆಯಡ ನಡುವಿನ ಪಂದ್ಯದಲ್ಲಿ ಮೇದುರ ತಂಡ 8 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಳೆಯಡ ತಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಗಳಿಸಿತು. ಮೇದುರ 5.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.

ಮಲ್ಲಂಗಡ ಮತ್ತು ಅಚ್ಚಕಾಳೇರ ತಂಡಗಳ ನಡುವಿನ ಹಣಾಹಣಿಯಲ್ಲಿ ಮಲ್ಲಂಗಡ ತಂಡ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಚ್ಚಕಾಳೇರ ತಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿತು. ಮಲ್ಲಂಗಡ ತಂಡ 4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.

ಮಂಡೀರ (ಮಾದಾಪುರ) ಮತ್ತು ಚೀಯಣಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೀಯಣಮಾಡ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಚೀಯಣಮಾಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನು ಗಳಿಸಿತು. ಮಂಡೀರ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 70 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು. 

ಕಳ್ಳೇಂಗಡ ಮತ್ತು ಮಾಚಿಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಿಮಂಡ ತಂಡ 53 ರನ್ ಗಳಿಂದ ಜಯ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಾಚಿಮಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 109 ರನ್ ಗಳನ್ನು ಗಳಿಸಿತು. ಕಳ್ಳೇಂಗಡ ತಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಮಾಚಿಮಂಡ ಪುನಿತ್ ಪೂವಣ್ಣ ದಾಖಲೆಯ 80 ರನ್ ಗಳನ್ನು ಸೇರಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. 

ಮುಕ್ಕಾಟಿರ (ಅರಪಟ್ಟು) ಮತ್ತು ಕಲಿಯಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ 5 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಲಿಯಾಟಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 68 ರನ್ ಗಳನ್ನು ಗಳಿಸಿತು. ಮುಕ್ಕಾಟಿರ ತಂಡ 5.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 71 ರನ್ ಗಳನ್ನು ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಮರುವಂಡ ಮತ್ತು ಕೈಪಟ್ಟಿರ ನಡುವಿನ ಪಂದ್ಯದಲ್ಲಿ ಕೈಪಟ್ಟಿರ ತಂಡ 30 ರನ್ ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮರುವಂಡ ತಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 52 ರನ್ ಗಳನ್ನು ಗಳಿಸಿತು. ಕೈಪಟ್ಟಿರ ತಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಗಳನ್ನು ಸೇರಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. 

ಮೈದಾನ 2;

ಗೀಜಿಗಂಡ ಮತ್ತು ದೇಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಗೀಜಿಗಂಡ 17 ರನ್ ಗಳಿಂದ ಜಯ ಸಾಧಿಸಿತು. ಗೀಜಿಗಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 70 ರನ್ ಗಳನ್ನು ಗಳಿಸಿದರೆ, ದೇಯಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಸೇರಿಸಿತು.

ಚಿಮ್ಮುಣಿರ (ಹರಿಹರ) ಮತ್ತು ಕೇತಿರ ತಂಡಗಳ ನಡುವಿನ ಪಂದ್ಯದಲ್ಲಿ ಕೇತಿರ 10 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಚಿಮ್ಮುಣಿರ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಮತ್ತು ಕೇತಿರ 3.3 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 57 ರನ್ ಗಳನ್ನು ಗಳಿಸಿತು.

ಬಾಚೀರ ಮತ್ತು ಐಪುಮಾಡ ತಂಡಗಳ ನಡುವಿನ ಹಣಾಹಣಿಯಲ್ಲಿ ಬಾಚೀರ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಬಾಚೀರ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 72 ರನ್ ಗಳನ್ನು ಗಳಿಸಿತು. ಐಪುಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 71 ರನ್ ಗಳನ್ನು ಸೇರಿಸಿತು.     

ಪೆಮ್ಮಣಮಾಡ (ಹರಿಹರ) ಮತ್ತು ಕೊಟ್ಟುಕತ್ತೀರ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ಟುಕತ್ತೀರ 10 ವಿಕೆಟ್ ಗಳ ಜಯ ಸಾಧಿಸಿತು. ಪೆಮ್ಮಣಮಾಡ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನು ಸೇರಿಸಿತು. ಕೊಟ್ಟುಕತ್ತೀರ 3.3 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 58 ರನ್ ಗಳನ್ನು ಗಳಿಸಿತು. 

ನಾಯಕಂಡ ಮತ್ತು ತೀತಿರ ನಡುವಿನ ಪಂದ್ಯದಲ್ಲಿ ನಾಯಕಂಡ ತಂಡಕ್ಕೆ 10 ವಿಕೆಟ್ ಗಳ ಜಯ ಲಭಿಸಿತು. ತೀತಿರ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಗಳಿಸಿತು. ನಾಯಕಂಡ 3.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 49 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು.

ಕೊಂಗAಡ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಿಮಾಡ 10 ವಿಕೆಟ್ ಗಳಿಂದ ಜಯ ಸಾಧಿಸಿತು. ಕೊಂಗಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಸೇರಿಸಿತು. ಪೊನ್ನಿಮಾಡ 5.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 62 ರನ್ ಗಳನ್ನು ಗಳಿಸಿತು.

ಚೆಂಬಂಡ ಮತ್ತು ಮತ್ರಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಂಬಂಡ ತಂಡಕ್ಕೆ 20 ರನ್ ಗಳ ಜಯ ಲಭಿಸಿತು. ಚೆಂಬAಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 77 ರನ್ ಗಳನ್ನು ಗಳಿಸಿತು. ಮಾತ್ರಂಡ 6 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 57 ರನ್ ಗಳನ್ನು ಸೇರಿಸಿತು.

ಬಲ್ಯಂಡ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡ 27 ರನ್ ಗಳ ಜಯ ಸಾಧಿಸಿತು. ಕುಪ್ಪಂಡ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 112 ರನ್ ಗಳನ್ನು ಮತ್ತು ಬಲ್ಯಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳನ್ನು ಗಳಿಸಿತು.