ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.9ರಂದು ಗೆಲುವು ಸಾಧಿಸಿದ ತಂಡಗಳು
ಮಡಿಕೇರಿ ಏ.9 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ' ಯಲ್ಲಿ ಏ.9ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು.
ಮೈದಾನ 1;
ಮುಕ್ಕಾಟಿರ (ಕಡಗದಾಳು) ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ 9 ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಕ್ಕಾಟಿರ ತಂಡ 6 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 29 ರನ್ ಗಳನ್ನು ಗಳಿಸಿತು. ಕನ್ನಂಡ ಕೇವಲ 2.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 30 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ಮಂಡೀರ (ನೆಲಜಿ) ಮತ್ತು ಕೆಚ್ಚೆಟ್ಟಿರ (ಬೇಗೂರು) ನಡುವಿನ ಪಂದ್ಯದಲ್ಲಿ ಮಂಡೀರ 3 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಡೀರ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೆಚ್ಚೆಟ್ಟಿರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.
ಮೀದೇರಿರ ಮತ್ತು ಕಂಜಿತoಡ ನಡುವಿನ ಪಂದ್ಯದಲ್ಲಿ ಮೀದೇರಿರ 2 ರನ್ ಗಳಿಂದ ಜಯ ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೀದೇರಿರ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 60 ರನ್ ಗಳನ್ನು ಗಳಿಸಿತು. ಕಂಜಿತoಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 58 ರನ್ ಗಳನ್ನು ಸೇರಿಸಿ ಪಂದ್ಯವನ್ನು ಸೋತುಕೊಂಡಿತು.
ಕೇತಿರ ಮತ್ತು ಕೋಳುಮಾಡಂಡ (ರ‍್ವತ್ತೊಕ್ಲು) ತಂಡಗಳ ನಡುವಿನ ಪಂದ್ಯದಲ್ಲಿ ಕೋಳುಮಾಡಂಡ 34 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಳುಮಾಡಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 69 ರನ್ ಗಳನ್ನು ಗಳಿಸಿತು. ಕೇತಿರ 6 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 35 ರನ್ ಗಳನ್ನು ಸೇರಿಸಿ ಸೋಲಿಗೆ ಶರಣಾಯಿತು.
ನಡಿಕೇರಿಯಂಡ ಮತ್ತು ಚೊಟ್ಟಂಗಡ ನಡುವಿನ ಪಂದ್ಯದಲ್ಲಿ ಚೊಟ್ಟಂಗಡ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಡಿಕೇರಿಯಂಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 32 ರನ್ ಗಳನ್ನು ಸೇರಿಸಿತು. ಚೊಟ್ಟಂಗಡ ತಂಡ ಕೇವಲ 2.3 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 34 ರನ್ ಗಳನ್ನು ಗಳಿಸಿ ಜಯ ಸಾಧಿಸಿತು.
ಕಾಂಡೇರ ಮತ್ತು ಮಂದನೆರವoಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಡೇರ 18 ರನ್ ಗಳಿಂದ ವಿಜಯ ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾಂಡೇರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಗಳಿಸಿತು. ಮಂದನೆರವoಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.
ಮೈದಾನ 2;
ಚೇಂದoಡ ಮತ್ತು ಮಾತಂಡ ತಂಡಗಳ ನಡುವಿನ ಹಣಾಹಣಿಯಲ್ಲಿ ಚೇಂದoಡ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಚೇಂದoಡ 4.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 37 ರನ್ ಗಳನ್ನು ಗಳಿಸಿತು. ಮಾತಂಡ 6 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 36 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.
ಅಜ್ಜಿನಿಕಂಡ ಮತ್ತು ತೀತಮಾಡ (ಕುಂದ) ನಡುವಿನ ಪಂದ್ಯದಲ್ಲಿ ತೀತಮಾಡ 9 ವಿಕೆಟ್ ಗಳಿಂದ ಜಯ ಸಾಧಿಸಿತು. ಅಜ್ಜಿನಿಕಂಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಸೇರಿಸಿತು. ತೀತಮಾಡ ಕೇವಲ 2.4 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು.
ತಡಿಯoಗಡ ಮತ್ತು ಚೆರುವಾಳಂಡ (ಪಾಲೂರು) ತಂಡಗಳ ನಡುವಿನ ಪಂದ್ಯದಲ್ಲಿ ಚೆರುವಾಳಂಡ 7 ವಿಕೆಟ್ ಗಳ ಗೆಲುವು ದಾಖಲಿಸಿತು. ತಡಿಯಂಗಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 60 ಗಳನ್ನು ಗಳಿಸಿತು. ಚೆರುವಾಳಂಡ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.
ಚಾಮೆರ ಮತ್ತು ಚೋನೀರ ನಡುವಿನ ಪಂದ್ಯದಲ್ಲಿ ಚೋನೀರ 13 ರನ್ ಗಳಿಂದ ಜಯ ದಾಖಲಿಸಿತು. ಚೋನೀರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 66 ರನ್ ಗಳನ್ನು ಸೇರಿಸಿತು. ಚಾಮೆರÀ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳನ್ನು ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
ನಾಳಿಯಂಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ ಆಲೆಮಾಡ 7 ವಿಕೆಟ್ ಗಳ ಜಯ ಸಾಧಿಸಿತು. ನಾಳಿಯಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 65 ರನ್ ಗಳನ್ನು ಸೇರಿಸಿತು. ಆಲೆಮಾಡ 5.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 66 ರನ್ ಗಳನ್ನು ಗಳಿಸಿ ಗೆಲುವು ಕಂಡಿತು.
ಬಲ್ಲಿಮಾಡ ಮತ್ತು ಮಚ್ಚಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಚ್ಚಮಾಡ 10 ವಿಕೆಟ್ ಗಳಿಂದ ವಿಜಯ ಸಾಧಿಸಿತು. ಬಲ್ಲಿಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 27 ರನ್ ಗಳನ್ನು ಗಳಿಸಿತು. ಮಚ್ಚಮಾಡ ಕೇವಲ 1.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 31 ರನ್ ಗಳನ್ನು ಸೇರಿಸಿ ಜಯಭೇರಿ ಬಾರಿಸಿತು.
ಬಡುವಂಡ ಮತ್ತು ಅರಮಣಮಾಡ (ಬೆಸಗೂರು) ನಡುವಿನ ಪಂದ್ಯದಲ್ಲಿ ಬಡುವಂಡ ತಂಡ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಅರಮಣಮಾಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 77 ರನ್ ಗಳನ್ನು ಸೇರಿಸಿತು. ಬಡುವಂಡ 5.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 78 ರನ್ ಗಳನ್ನು ಗಳಿಸಿ ಜಯ ಕಂಡಿತು.