ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ;ಇಂದಿನ ಪಂದ್ಯ ಗೆಲುವು ಸಾಧಿಸಿದ ತಂಡಗಳ ವಿವರ
ಮಡಿಕೇರಿ ಏ.5 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಲ್ಲಿ ಏ.5ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು.
ಮೈದಾನ 1;
ಮಾಚೆಟ್ಟಿರ ಮತ್ತು ಐಚೋಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಐಚೋಡಿಯಂಡ 5 ವಿಕೆಟ್ ಗಳ ಜಯ ಸಾಧಿಸಿದೆ. ಐಚೋಡಿಯಂಡ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾಚೆಟ್ಟಿರ ತಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿತು. ಐಚೋಡಿಯಂಡ ತಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.
ನಾಳಿಯಂಡ ಮತ್ತು ಚೆಟ್ರಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಳಿಯಂಡ 51 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದ ನಾಳಿಯಂಡ ಬ್ಯಾಟಿಂಗ್ ಆಯ್ದುಕೊಂಡು 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 80 ರನ್ ಗಳನ್ನು ಗಳಿಸಿತು. ಚೆಟ್ರಂಡ ತಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 29 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಮಾಚೆಟ್ಟಿರ (ಬಾಳುಗೋಡು) ಮತ್ತು ಮಾಚಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚೆಟ್ಟಿರ ತಂಡ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಮಾಚೆಟ್ಟಿರ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾಚಂಗಡ ತಂಡ 6 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 30 ರನ್ ಗಳನ್ನು ಗಳಿಸಿತು. ಮಾಚೆಟ್ಟಿರ ತಂಡ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 33 ರನ್ ಗಳನ್ನು ಸೇರಿಸಿ ಗೆಲುವು ಸಾಧಿಸಿತು.
ಕಾಯಪಂಡ ಮತ್ತು ಕಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಯಪಂಡ ತಂಡಕ್ಕೆ 22 ರನ್‌ಗಳ ಜಯ ಲಭಿಸಿದೆ. ಕಳ್ಳಂಗಡ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕಾಯಪಂಡ ತಂಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 80 ರನ್ ಗಳನ್ನು ಸೇರಿಸಿತು. ಕಲ್ಲಂಗಡ ತಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 58 ರನ್ ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು.
ಚೆಟ್ಟಿಯಾರಂಡ ಮತ್ತು ಬಲ್ಯಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಟ್ಟಿಯಾರಂಡ ತಂಡ ವಾಕ್ ಓವರ್ ಮೂಲಕ ಗೆಲುವು ಸಾಧಿಸಿತು.
ಕಡೆಮಾಡ ಮತ್ತು ಪುದಿಯೊಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ಪುದಿಯೊಕ್ಕಡ 8 ವಿಕೆಟ್ ಗಳ ಜಯ ಸಾಧಿಸಿತು. ಪುದಿಯೊಕ್ಕಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕಡೆಮಾಡ ತಂಡ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿತು. ಪುದಿಯೊಕ್ಕಡ ತಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 91 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.
ಮೈದಾನ 2;
ಕುಂಞರ ಮತ್ತು ಪರದಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಞರ ತಂಡ 9 ವಿಕೆಟ್‌ಗಳ ಜಯ ಸಾಧಿಸಿತು. ಪರದಂಡ ತಂಡ 2 ವಿಕೆಟ್ ನಷ್ಟಕ್ಕೆ 64 ರನ್ ಗಳನ್ನು ಗಳಿಸಿದರೆ, ಕುಂಞರ 1 ವಿಕೆಟ್ ನಷ್ಟಕ್ಕೆ 65 ರನ್ ಗಳನ್ನು ಸೇರಿಸಿತು.
ಸೋಮೆಯಂಡ ಮತ್ತು ಮುಕ್ಕಾಟಿರ (ಪುಲಿಕೋಟು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ 9 ವಿಕೆಟ್ ಗಳ ಜಯ ಲಭಿಸಿತು. ಸೋಮೆಯಂಡ ತಂಡ 5 ವಿಕೆಟ್ ನಷ್ಟಕ್ಕೆ 27 ರನ್ ಗಳನ್ನು ಗಳಿಸಿದರೆ ಮುಕ್ಕಾಟಿರ 1 ವಿಕೆಟ್ ನಷ್ಟಕ್ಕೆ 28 ರನ್ ಗಳನ್ನು ಗಳಿಸಿತು.
ಕುಂದೀರ ಮತ್ತು ಕೋದಂಡ ನಡುವಿನ ಪಂದ್ಯದಲ್ಲಿ ಕುಂದೀರ ತಂಡ 28 ರನ್ ಗಳ ಜಯ ಸಾಧಿಸಿತು. ಕುಂದೀರ 1 ವಿಕೆಟ್ ನಷ್ಟಕ್ಕೆ 81 ರನ್ ಗಳನ್ನು ಗಳಿಸಿದರೆ, ಕೋದಂಡ 2 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು.
ಮುದ್ದಿಯಡ ಮತ್ತು ಆದೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಆದೇಂಗಡ 9 ವಿಕೆಟ್ ಗಳ ಗೆಲುವು ದಾಖಲಿಸಿತು. ಮುದ್ದಿಯಡ ತಂಡ 3 ವಿಕೆಟ್ ನಷ್ಟಕ್ಕೆ 49 ರನ್ ಗಳನ್ನು ಗಳಿಸಿದರೆ, ಆದೇಂಗಡ 1 ವಿಕೆಟ್ ನಷ್ಟಕ್ಕೆ 50 ರನ್ ಗಳನ್ನು ಸೇರಿಸಿತು.
ಕೊಡಂದೇರ ಮತ್ತು ಪುಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಡಂದೇರ ತಂಡ 10 ರನ್ ಗಳ ಜಯ ಸಾಧಿಸಿತು. ಕೊಡಂದೇರ 2 ವಿಕೆಟ್ ನಷ್ಟಕ್ಕೆ 84 ರನ್ ಗಳನ್ನು ಗಳಿಸಿದರೆ, ಪುಳ್ಳಂಗಡ 3 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಗಳಿಸಿತು.
ಕಟ್ಟೇರ (ಅರಮೇರಿ) ಮತ್ತು ಚಿಂಡಮಾಡ ನಡುವಿನ ಪಂದ್ಯದಲ್ಲಿ ಕಟ್ಟೇರ ತಂಡ 20 ರನ್ ಗಳ ಜಯ ಸಾಧಿಸಿತು. ಚಿಂಡಮಾಡ 3 ವಿಕೆಟ್ ನಷ್ಟಕ್ಕೆ 53 ರನ್ ಗಳನ್ನು ಗಳಿಸಿದರೆ, ಕಟ್ಟೇರ 5 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನು ಸೇರಿಸಿತು.
ಮೇಕೇರಿರ ಮತ್ತು ನಂದಿರ ತಂಡಗಳ ನಡುವಿನ ಪಂದ್ಯದಲ್ಲಿ ನಂದಿರ ತಂಡ 37 ರನ್ ಗಳ ಗೆಲುವು ದಾಖಲಿಸಿತು. ಮೇಕೇರಿರ 6 ವಿಕೆಟ್ ನಷ್ಟಕ್ಕೆ 45 ರನ್ ಗಳನ್ನು ಸೇರಿಸಿತು, ನಂದಿರ 3 ವಿಕೆಟ್ ನಷ್ಟಕ್ಕೆ 82 ರನ್ ಗಳನ್ನು ಗಳಿಸಿತು.