Kodagu

ಅದ್ವೈತ್ ಮೋಟರ್ಸ್ ಇಂಡಿಯಾ ಕಂಪನಿಗೆ ಭಾಗಮಂಡಲ ಕೆವಿಜಿ ಐಟಿಐ ವಿದ್ಯಾರ್ಥಿಗಳು ಆಯ್ಕೆ

admincoorgdaily

ಅದ್ವೈತ್ ಮೋಟರ್ಸ್ ಇಂಡಿಯಾ ಕಂಪನಿಗೆ ಭಾಗಮಂಡಲ ಕೆವಿಜಿ ಐಟಿಐ ವಿದ್ಯಾರ್ಥಿಗಳು ಆಯ್ಕೆ

ಭಾಗಮಂಡಲ: ಬೆಂಗಳೂರಿನ ಅದ್ವೈತ್ ಮೋಟರ್ಸ್ ಇಂಡಿಯಾ ಕಂಪನಿಯವರು ಸುಳ್ಯದ ಕೆವಿಜಿ ಐ. ಟಿ. ಐ ಯಲ್ಲಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಭಾಗಮಂಡಲದ ಕೆವಿಜಿ ಐಟಿಐ ಎಂ. ಎಂ. ವಿ. ವೃತ್ತಿ ವಿಭಾಗದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

 ಕೆವಿಜಿ ಐಟಿಐ ಭಾಗಮಂಡಲದ ಸಹ ಸಂಸ್ಥೆ ಅದ ಕೆವಿಜಿ ಐಟಿಐ ಸುಳ್ಯದಲ್ಲಿ ಅದ್ವೈತ ಹುಂಡೈ ಮೋಟರ್ಸ್ ವತಿಯಿಂದ ಕರ್ನಾಟಕದ ವಿವಿಧ ಶಾಖೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಶ್ರೀ ಆನಂದ್ ಇವರು ಸಂದರ್ಶನ ಪ್ರಕ್ರಿಯೆ ನಡೆಸಿದರು. ಎರಡು ಐಟಿಐ ನ ಎಂ. ಎಂ. ವಿ ವೃತ್ತಿ ವಿಭಾಗ ಭಾಗದ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು .ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದರು.