ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿದ್ದಂಡ ರಾಜೇಶ್ ಅಚ್ಚಯ್ಯ,ಉಪಾಧ್ಯಕ್ಷರಾಗಿ ಪಾಡಿಯಂಡ ಕಟ್ಟಿ ಕುಶಾಲಪ್ಪ ಆಯ್ಕೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಭಾರತೀಯ ಜನತಾ ಪಾರ್ಟಿಯ ಚೆಯ್ಯಂಡಾಣೆ, ಕೊಣಂಜಗೇರಿ ಹಾಗೂ ಕಕ್ಕಬ್ಬೆ ಶಕ್ತಿಕೇದ್ರದ ಮಾಹಶಕ್ತಿ ಅಧ್ಯಕ್ಷರಾಗಿ ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿದ್ದಂಡ ರಾಜೇಶ್ ಅಚ್ಚಯ್ಯ,ಉಪಾಧ್ಯಕ್ಷರಾಗಿ ಕೊಣಂಜಗೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಾಡಿಯಂಡ ಕಟ್ಟಿ ಕುಶಾಲಪ್ಪ ಅವರು ಆಯ್ಕೆಯಾಗಿದ್ದಾರೆ.
ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಡಿಕೇರಿ ನಗರ ಸಭೆಯ ಮಾಜಿ ಸದಸ್ಯರಾದ ಕನ್ನಂಡ ಸಂಪತ್ ಅವರ ಅಧ್ಯಕ್ಷೆತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಇವರನ್ನು ಆಯ್ಕೆಮಾಡಲಾಯಿತು. ಮಹಿಳಾ ಸದಸ್ಯರಾಗಿ ಪರದಂಡ ಪ್ರಮೀಳಾ,ಒಬಿಸಿ ವರ್ಗದಿಂದ ಬಿ. ಕೆ.ಜನಾರ್ಧನ,ಎಸ್.ಟಿ ವರ್ಗದಿಂದ ಎಚ್. ಯು.ನಾಣಯ್ಯ ಅವರನ್ನು ಆಯ್ಕೆಮಾಡಲಾಯಿತು.