ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಮೂರ್ನಾಡಿನ ಬಿಪಿನ್ ಚಿಣ್ಣಪ್ಪ ಸಾಧನೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಓಕಿನೋವಾ ಫಾರಿನ್ ರಿಯೊ ಕರಾಟೆ ಸಂಸ್ಥೆ ವತಿಯಿಂದ ಆಯೋಜಿಸಲಾದ ಇಂಡಿಪೆಂಡೆನ್ಸ್ ಕಪ್ 2026 ರ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಮೂರ್ನಾಡಿನ ಬಿಪಿನ್ ಚಿಣ್ಣಪ್ಪ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಮೂರ್ನಾಡಿನ ಎಜುಕೇಶನ್ ಸೊಸೈಟಿ ವಿದ್ಯಾರ್ಥಿಯಾಗಿರುವ ಬಿಪಿನ್ ಚಿಣ್ಣಪ್ಪ ಕರಾಟೆಯಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಪಡೆದು ಸಾಧನೆ ಮಾಡಿದ್ದಾರೆ. ಪಾರಾಣೆ ಕೊಣಂಜಗೇರಿ ಗ್ರಾಮದ ನಿವಾಸಿ ಬೈರಿಕುಂದಿರ ಮನು ಹಾಗೂ ಪವಿತ್ರ ದಂಪತಿಗಳ ಪುತ್ರನಾಗಿರುವ ಬಿಪಿನ್ ಚಿಣ್ಣಪ್ಪ, ರಾಷ್ಟ್ರೀಯ ತೀರ್ಪುಗಾರ ಹಾಗೂ ಮಾಜಿ ಸೈನಿಕ ಜಿ.ಕೆ.ನಾಗೇಂದ್ರ ಹಾಗೂ ಬ್ಲಾಕ್ ಬೆಲ್ಟ್ ಮಾಸ್ಟರ್ ಎಂ.ಎಸ್. ಪವನ್ ಅವರಿಂದ ಬಿಪಿನ್ ಚಿಣ್ಣಪ್ಪ ತರಬೇತಿ ಪಡೆದುಕೊಂಡಿರುತ್ತಾರೆ.