ಕಾರ್ಮಾಡು ರಾಮಮಂದಿರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟು ಹಬ್ಬಾಚರಣೆ

Jan 23, 2026 - 18:56
 0  277
ಕಾರ್ಮಾಡು ರಾಮಮಂದಿರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟು ಹಬ್ಬಾಚರಣೆ

ವಿರಾಜಪೇಟೆ; ಸಮೀಪದ ಅಮ್ಮತ್ತಿ ಕಾರ್ಮಾಡುವಿನ ರಾಮಮಂದಿರದಲ್ಲಿ ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರ ಹುಟ್ಟು ಹಬ್ಬವನ್ನು ಎಸ್ಸಿ- ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಅಮ್ಮತಿ ಜಯಮ್ಮ ಅವರ ನೇತೃತ್ವದಲ್ಲಿ ಪುಟಾಣಿ ಮಕ್ಕಳು ಸಾರ್ವಜನಿಕರು ಮಹಿಳೆಯರು ಹಾಗೂ ಪಕ್ಷದ ಮುಖಂಡರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

 ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ ಮಂಜುನಾಥ್, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮಜೀದ್ ಚೋಕಂಡಳ್ಳಿ , ಮಡಿಕೇರಿ ತಾಲೂಕಿನ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಶ್ರಫ್, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಿಯಾಬುದ್ದೀನ್ ವಿ.ಪಿ.ಎಸ್, ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ ಹರ್ಷ ಟಿ ಆರ್, ಮೇಘನಾ, ಸುಮತಿ,ಗೀತಾ , ಸರಸು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0