ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನೀಲಿ ಬಣ್ಣದ ಆಚರಣೆ

Dec 10, 2025 - 19:10
 0  663
ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನೀಲಿ ಬಣ್ಣದ ಆಚರಣೆ

ಸಿದ್ದಾಪುರ:- ಸಿದ್ದಾಪುರ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ (CBSE) ಶಾಲೆಯ ನರ್ಸರಿ ವಿಭಾಗದಲ್ಲಿ ನೀಲಿ ಬಣ್ಣದ ದಿನವನ್ನು (ಬ್ಲೂ ಡೇ ) ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬುಧವಾರ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಾಲೆಯ ನರ್ಸರಿ ಮಕ್ಕಳು ನೀಲಿ ಬಣ್ಣದ ಉಡುಗೆ ಧರಿಸಿ, ನೀಲಿ ವಸ್ತುಗಳನ್ನು ತಂದು, ಚಿತ್ರ ಬಿಡಿಸುವುದು ಹಾಡು ಹೇಳುವುದು,ಮತ್ತು ವಿವಿಧ ನೀಲಿ ಬಣ್ಣದ ವಸ್ತುಗಳ ಬಗ್ಗೆ ಮಾತನಾಡುವಂತಹ ಚಟುವಟಿಕೆ ಹಾಗೂನೀಲಿ ಬಣ್ಣದ ಕುರಿತಾದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದರು.

ಹಾಗೂ ನರ್ಸರಿಶಾಲೆ ಯಲ್ಲಿ ನೀಲಿ ಬಣ್ಣ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು ಅತಿಥಿಗಳು ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆಯನ್ನು ಇದೆ ಸಂದರ್ಭ ವ್ಯಕ್ತಪಡಿಸಿದರು.

ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಅರ್ಪಿತ ಮಾತನಾಡಿ ನೀಲಿ ದಿನ ಆಚರಣೆ ಯಿಂದ ಪರಿಸರದ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ನೀಲಿ ಬಣ್ಣ ನಮ್ಮ ಜೀವನದ ಒಂದು ಅವಿಭಾಜ್ಯ ಬಣ್ಣವಾಗಿದ್ದು ಪರಿಸರ ದಲ್ಲಿ ಕೊಡ ಇದಕ್ಕೆ ವಿಶೇಷವಾದ ಮಹತ್ವ ಇದೆ.ಹಾಗೂ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ ವಿಶೇಷ ವಾಗಿ ಶಾಂತತೆ, ವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಲೆಯ ನಿವೃತ್ತ ಶಿಕ್ಷಕಿರಾದ ಸುಶೀಲ,ಮೆರಿಲ ಜಯಂತಿ,ಕ್ಲೆಮಟ್ ಮ್ಯಾಕ್ಲಿನ್,( CBSE) ಶಾಲೆಯ ಪ್ರಾಂಶುಪಾಲರಾದ  ಸಿಸ್ಟರ್ ಲೆನಿಟ್, ಕಲಾವಿದ ಭಾವ ಮಾಲ್ದಾರೆ,ನರ್ಸರಿ ಶಾಲೆಯ ಶಿಕ್ಷಕರಾದ ಲೇನ್ನಿ, ಸುನೀತ, ಟ್ರೀಜ,ತೆರೇಸ,ಎಲಿಸ, ಶೈನಿ,ಸಲೀನ ಹಾಗೂ ಕನ್ನಡ ಮಾಧ್ಯಮದ ಸಹ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0