ಐತಿಹಾಸಿಕ "ಮೈಸೂರು ದಸರಾ" ಉದ್ಘಾಟಿಸಲಿದ್ದಾರೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಸ್ತಾಕ್

Aug 22, 2025 - 16:55
 0  96
ಐತಿಹಾಸಿಕ "ಮೈಸೂರು ದಸರಾ" ಉದ್ಘಾಟಿಸಲಿದ್ದಾರೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಸ್ತಾಕ್

ಬೆಂಗಳೂರು : ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಸ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕ‌ರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ಕಾಕ್ ಅವರು ಉದ್ಘಾಟಿಸಲಿದ್ದಾರೆ ಎಂದರು. ಬೂಕ‌ರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಆಗಲಿದ್ದು, ಕರ್ನಾಟಕದ ಓರ್ವ ಮಹಿಳೆಗೆ ಭೂಕ‌ರ್ ಪ್ರಶಸ್ತಿ ಸಿಕ್ಕಿರೊದು ಬಹಳ ಸಂತೋಷದ ವಿಷಯವಾಗಿದೆ. ಬಾನು ಮುಷ್ತಾಕ್ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು ಎಂದು ಹೇಳಿದರು. ಈ ಭಾರಿ 11ದಿನ ದಸರಾ ನಡೆಯಲಿದ್ದು, ಸೆ.22ರಿಂದ ದಸರಾ ಆರಂಭ ಆಗಲಿದೆ. ಬಾನು ಮುಸ್ತಾಕ್ ಅವರನ್ನು ಗೌರವದಿಂದ ಜಿಲ್ಲಾಡಳಿತ ಆಹ್ವಾನಿಸಲಿದೆ ಎಂದು ಹೇಳಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1