ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾಟ :ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ

Jul 24, 2026 - 17:40
 0  55
ಬಾಲಕರ ಟೇಬಲ್ ಟೆನ್ನಿಸ್  ಪಂದ್ಯಾಟ :ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ

ಮಡಿಕೇರಿ, ಜು 24 - ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ದಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ VIII ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯದ 17 ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನಿಸ್ ತಂಡವು ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.

ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 200 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಕೊಡಗು ವಿದ್ಯಾಲಯದ ಆಟಗಾರರಾದ ಅವನೀಶ್ ಕೃಷ್ಣ, ದೇವಾರ್ಯ, ಫೆಲಿಕ್ಸ್ ರೊನಾಲ್ಡ್ ಮತ್ತು ಅದಿತ್ ಗೌತಮ್ ಅವರನ್ನು ಒಳಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ *3ನೇ ಸ್ಥಾನ* ವನ್ನು ಗಳಿಸುವುದರೊಂದಿಗೆ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ತಂಡದ ಆಟಗಾರರನ್ನು ಶುಭಮ್ ಸಾತ್ವಿಕ್ ತರಬೇತಿ ಗೊಳಿಸಿರುತ್ತಾರೆ ಎಂದು ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್ ಅವರು ತಿಳಿಸಿರುತ್ತಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0