ಲಂಚ ಪ್ರಕರಣ: ವಿರಾಜಪೇಟೆ ಡಿಆರ್‌ಎಫ್‌ಒ ಉಲ್ಲಾಸ್ ಪ್ರಕಾಶ್‌ಗೆ ಕಡ್ಡಾಯ ನಿವೃತ್ತಿ

Jul 3, 2026 - 23:48
 0  1k
ಲಂಚ ಪ್ರಕರಣ: ವಿರಾಜಪೇಟೆ ಡಿಆರ್‌ಎಫ್‌ಒ ಉಲ್ಲಾಸ್ ಪ್ರಕಾಶ್‌ಗೆ ಕಡ್ಡಾಯ ನಿವೃತ್ತಿ

ವಿರಾಜಪೇಟೆ, ಜು.4: ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ (DRFO) ಉಲ್ಲಾಸ್ ಪ್ರಕಾಶ್ ಮಾದಾರ ಅವರಿಗೆ ಸೇವೆಯಿಂದ ಕಡ್ಡಾಯ ನಿವೃತ್ತಿ ದಂಡ ವಿಧಿಸಲಾಗಿದೆ.

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಪಾಟೀಲ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 8(vi)ರ ಅಡಿ ಈ ಶಿಕ್ಷೆ ವಿಧಿಸಲಾಗಿದೆ.

ಆರೋಪವೇನು?

ಉಲ್ಲಾಸ್ ಪ್ರಕಾಶ್ ಮಾದಾರ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ಎಂ.ಪಿ. ಮನು ಎಂಬುವವರು ತಮ್ಮ ಮನೆಯ ದುರಸ್ತಿಗಾಗಿ ಖರೀದಿಸಿ ಮನೆಯ ಆವರಣದಲ್ಲಿ ಸಂಗ್ರಹಿಸಿದ್ದ ಮರದ ದಿಮ್ಮಿಗಳ ಕುರಿತು ಪ್ರಕರಣ ದಾಖಲಿಸದಿರಲು 20,000 ದಿಂದ 30,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ಆರೋಪದ ಕುರಿತು ಇಲಾಖಾ ವಿಚಾರಣೆ ನಡೆಸಲಾಗಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರ ಕಡ್ಡಾಯ ನಿವೃತ್ತಿಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0