ಬಾಳೆಲೆ ನಿಟ್ಟೂರು ಮುಖ್ಯ ರಸ್ತೆಯಲ್ಲೇ ಕೆಟ್ಟು ನಿಂತ ಸಿಮೆಂಟ್ ಮಿಕ್ಸರ್ ಯಂತ್ರ
ಪೊನ್ನಂಪೇಟೆ:ನಿಟ್ಟೂರಿನಲ್ಲಿ ಕಾಮಗಾರಿಯೊಂದನ್ನು ಮುಗಿಸಿ ಗುತ್ತಿಗೆದಾರರೊಬ್ಬರು ಗೋಣಿಕೊಪ್ಪಲು ಕಡೆ ಪಿಕ್ಕಪ್ ವಾಹನ ಬಳಸಿ ಸಿಮೆಂಟ್ ಮಿಕ್ಸಿಂಗ್ ಯಂತ್ರವನ್ನು ಎಳೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಣ ತೀರ್ಥ ನದಿಯ ಸಮೀಪ ಸಿಮೆಂಟ್ ಮಿಕ್ಸರ್ ಯಂತ್ರದ ಚಕ್ರದಲ್ಲಿ ತಾಂತ್ರಿಕ ದೋಷ ಕಂಡುಕೊಂಡ ಹಿನ್ನೆಲೆಯಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ರಸ್ತೆಯ ಒಂದು ಬದಿಯಲ್ಲಿ ಬಿಟ್ಟು ಹೋಗಿದ್ದಾರೆ.
ಈ ರಸ್ತೆಯಲ್ಲಿ ತಿತಿಮತಿ ಕಡೆಯಿಂದ ಹಗಲು ರಾತ್ರಿ ಮನಂದವಾಡಿ ಕಡೆಗೆ ,ಹಾಗೂ ಹೆಗ್ಗಡೆ ದೇವನಕೋಟೆ ಕಡೆ ತರಳುವ ಜೊತೆಗೆ ಸ್ಥಳೀಯ ಬಸ್ ಗಳು ಶಾಲಾ ವಾಹನಳು ಆಟೊರಿಕ್ಷಾ ಸೇರಿದಂತೆ ಅಧಿಕ ವಾಹಾನಗಳು ಓಡಾಡುತ್ತಿದ್ದು ಸಿಮೆಂಟ್ ಮಿಕ್ಸಿಂಗ್ ಯಂತ್ರ ತಗ್ಗು ಪ್ರದೇಶದ ಮುಖ್ಯ ರಸ್ತೆಯಲ್ಲೇ ನಿಂತಿರುವುದರಿಂದ ಅಪಘಾತಗಳು ಸಂಭವಿಸಿವ ಸಾಧ್ಯತೆಗಳಿದ್ದು ವಹಾನಗಳ ಸಂಚಾರಕ್ಕೆ ಅಡಚಣೆಯಾಗಿದೆ. ತಕ್ಷಣವೇ ಯಂತ್ರವನ್ನು ಸ್ಥಳಾಂತರಿಸಿ ರಸ್ತೆ ಸಂಚಾರ ಸುಗಮಗಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

