ಬಾಲಕಿಯನ್ನು ಅಪಹರಿಸಿ ಮಾರಾಟ ಮಾಡಿದ ಸೋದರ ಮಾವ!

Nov 28, 2025 - 11:11
 0  1.1k
ಬಾಲಕಿಯನ್ನು ಅಪಹರಿಸಿ ಮಾರಾಟ ಮಾಡಿದ ಸೋದರ ಮಾವ!

ಮುಂಬೈ: ವಕೋಲಾ ಪ್ರದೇಶದಲ್ಲಿ ಬಾಲಕಿಯನ್ನು ಆಕೆಯ ಸೋದರ ಮಾವನ ಅಪಹರಿಸಿ ₹90 ಸಾವಿರಕ್ಕೆ ಮಾರಾಟ ಮಾಡಿದ ಪ್ರಕರಣವನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಬಾಲಕಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಕುಟುಂಬದವರಿಗೆ ಒಪ್ಪಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಗುರುವಾರ ಮಧ್ಯರಾತ್ರಿ ಬಾಲಕಿಯನ್ನು ಸೋದರ ಮಾವ ಹಾಗೂ ಇನ್ನೂ ಐವರು ಸೇರಿ ಅಪಹರಿಸಿದ್ದರು. ನಂತರ ಆಕೆಯನ್ನು ₹90 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು. ಆಕೆಯನ್ನು ಖರೀದಿಸಿದ ವ್ಯಕ್ತಿ ಮತ್ತೊಬ್ಬರಿಗೆ ₹1,80,000ಕ್ಕೆ ಮರು ಮಾರಾಟ ಮಾಡಿದ ಮಾಹಿತಿ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಅಪಹರಣದ ವಿಷಯ ತಿಳಿದ ತಕ್ಷಣ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣದ ಜಾಡು ಹಿಡಿದ ಪೊಲೀಸರು ಬಾಲಕಿಯನ್ನು ಪನ್ವೇಲ್ ಪ್ರದೇಶದಲ್ಲಿ ಇರಿಸಿರುವುದನ್ನು ಪತ್ತೆಹಚ್ಚಿ, ತಕ್ಷಣ ಶೋಧ ನಡೆಸಿ ರಕ್ಷಣೆ ಮಾಡಿದ್ದಾರೆ. 

ಈ ಪ್ರಕರಣದಲ್ಲಿ ಅಪಹರಣ ಮತ್ತು ಮಾನವ ಕಳ್ಳಸಾಗಣೆ ಆರೋಪಗಳಡಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 1
Sad Sad 4
Wow Wow 0