Sports News

ಅಮೇರಿಕನ್ ಐಸ್ ಹಾಕಿಯಲ್ಲಿ ಚಾಪು ಮೂಡಿಸಿದ ಕೊಡಗು ಮೂಲದ ಸಹೋದರರು

admincoorgdaily

ಅಮೇರಿಕನ್ ಐಸ್ ಹಾಕಿಯಲ್ಲಿ ಚಾಪು ಮೂಡಿಸಿದ ಕೊಡಗು ಮೂಲದ ಸಹೋದರರು

ವಿರಾಜಪೇಟೆ: ಕೊಡಗಿನಲ್ಲಿ ಮೂಲದ ಇಬ್ಬರು ಸಹೋದರರು ಅಮೇರಿಕಾದ ಟೆಕ್ಸಾಸ್ ಫ್ರಿಸ್ಕೊ ಹಾಕಿ ಅಸೋಸಿಯೇಷನ್‌ನ ಸ್ಪರ್ಧಾತ್ಮಕ ತಂಡಗಳಿಗೆ ಆಯ್ಕೆಯಾಗುವ ಮೂಲಕ ಅಮೇರಿಕನ್ ಐಸ್ ಹಾಕಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಮೇಯನ್ ಮಾಚಯ್ಯ ಮೇರಿಯಂಡ(15) ಅವರನ್ನು ವರ್ಸಿಟಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದು ಅವರ ಕಿರಿಯ ಸಹೋದರ ಕ್ರಿಶ್ ಕಾರಿಯಪ್ಪ ಮೇರಿಯಂಡ (13). 2026ರ ಬೇಸಿಗೆ ಋತುವಿಗಾಗಿ ಜೂನಿಯರ್ ವಾರ್ಸಿಟಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

 ಇವರ ಈ ಸಾಧನೆಯು ಕರ್ನಾಟಕದ ಕುಟುಂಬಸ್ಥರು, ಸ್ನೆಹಿತರು ಮತ್ತು ಹಿತೈಷಿಗಳಲ್ಲಿ ಹೆಮ್ಮೆ ತಂದಿದೆ. ಐಸ್ ಹಾಕಿ ಒಂದು ಅಸಮಾನ್ಯ ಕ್ರೀಡೆಯಾಗಿದ್ದು ಕೊಡಗಿನ ಈ ಸಹೋದರರು ತಮ್ಮ ಪರಿಶ್ರಮ ಹಾಗೂ ತರಬೇತಿಯಿಂದಾಗಿ ಉತ್ತರ ಅಮೇರಿಕಾದಲ್ಲಿ ಬಹು ಬೇಡಿಕೆ ಇರುವ ತಂಡಕ್ಕೆ ಆಯ್ಕೆಯಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ.

 ಫ್ರಿಸ್ಕೊದ ಇಂಡಿಪೆಂಡೆನ್ಸ್ ಸ್ಕೂಲ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿರುವ ಮೇಯನ್ ನೀಡಿದ ಉತ್ತಮ ಪ್ರದರ್ಶನದ ನಂತರ ವಾರ್ಸಿಟಿ ತಂಡಕ್ಕೆ ಬಡ್ತಿ ಪಡೆದಿದ್ದಾರೆ. ಇತ್ತೀಚೆಗೆ ನೆಲ್ಸನ್ ಮಿಡಲ್ ಸ್ಕೂಲ್‌ನಲ್ಲಿ 8ನೇ ತರಗತಿ ಪೂರ್ಣಗೊಳಿಸಿದ ಕ್ರಿಶ್ ಅಭಿವೃದ್ಧಿ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಿದ ನಂತರ ಜೂನಿಯರ್ ವಾರ್ಸಿಟಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡರು.

ಐಸ್ ಹಾಕಿಯು ವೇಗ, ಕೌಶಲ್ಯ, ಸಹಿಶ್ಣುತೆ, ಸಮತೋಲನ ಮತ್ತು ತಂಡದ ಸಾಮರಸ್ಯದೊಂದಿಗೆ ಆಡುವ ವೇಗದ ಕ್ರೀಡೆಯಾಗಿದೆ. ಸಹೋದರರು ಚಿಕ್ಕ ವಯಸ್ಸಿನಿಂದಲೂ ಈ ಕೀಡೆಯನ್ನು ಆಡುತಿದ್ದಾರೆ ಮತ್ತು ಟೆಕ್ಸಾಸ್‌ನಲ್ಲಿ ಯುವ ಹಾಕಿ ಕಾರ್ಯಕ್ರಮಗಳ ಮೂಲಕ ತರಬೇತಿ ಪಡೆದಿದ್ದಾರೆ.

ಈ ಸಹೋದರರು ಕೊಡಗಿನ ಮೇರಿಯಂಡ ಕುಟುಂಬಕ್ಕೆ ಸೇರಿದವರಾಗಿದ್ದು, ಇವರು ಶಿರೋ ಟಿಕ್ನಾಲಾಜೀಸ್‌ನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿಯಾಗಿರುವ ಶ್ರೀಕಾಂತ್ ತಿಮ್ಮಯ್ಯ ಮತ್ತು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಮ್ಮ ಚೆನಾಂಡ ಅವರ ಪುತ್ರರು. ಇವರ ಅಜ್ಜ ದಿವಂಗತ ಮೇರಿಯಂ

ಡ ಕೆ ತಿಮ್ಮಯ್ಯ ಅವರು ಖ್ಯಾತ ವಕೀಲರಾಗಿದ್ದರು. 

ಇವರ ಅಜ್ಜಿ ಶಾರದ ತಮ್ಮಯ್ಯ ಅವರು ಮೈಸೂರಿನಲ್ಲಿ ವಾಸಿಸುತಿದ್ದಾರೆ. ಅಮೇರಿಕಾದಲ್ಲಿ ಬೆಳೆದಿದ್ದರು ಸಹ ಈ ಸಹೊದರರು ಕೊಡಗಿಗೆ ನಿಯಮಿತವಾಗಿ ಭೆಟಿ ನೀಡುವ ಮೂಲಕ ಕರ್ನಟಕದೊಂದಿಗೆ ತಮ್ಮ ನಿಕಟ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.