ಸಿಪಿಎಲ್ ಲೋಗೋ ಅನಾವರಣ; ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್‌ಗೆ ಅಧಿಕೃತ ಚಾಲನೆ

Feb 5, 2026 - 17:07
 0  563
ಸಿಪಿಎಲ್ ಲೋಗೋ ಅನಾವರಣ;   ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್‌ಗೆ ಅಧಿಕೃತ ಚಾಲನೆ

ಸಿದ್ದಾಪುರ:ಸಿಜೆ ಬಿಲ್ಡ್‌ವೇರ್ ಪ್ರಸ್ತುತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ–1ರ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವು ನೆಲ್ಯಹುದಿಕೇರಿಯ ಕೋಫಿಯಾ ರೆಸ್ಟೋರೆಂಟ್‌ನಲ್ಲಿ ಬುಧವಾರ ಸಂಜೆ ನಡೆಯಿತು.

ಲೋಗೋ ಅನಾವರಣದ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ನೀಡಲಾಯಿತು. ಏಪ್ರಿಲ್ 10 11 ಮತ್ತು 12ರಂದು ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಕೊಡಗು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಯುವಕರಿಗೆ ಕ್ರೀಡಾ ವೇದಿಕೆ ಒದಗಿಸುವ ಉದ್ದೇಶದಿಂದ ಈ ಲೀಗ್ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಿಜೆ ಬಿಲ್ಡ್‌ವೇರ್‌ನ ವ್ಯವಸ್ಥಾಪಕ ಪ್ರಿನ್ಸ್, ಸಂಸ್ಥೆ ಸದಾ ಕ್ರೀಡೆ, ಶಿಸ್ತು ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿಪಿಎಲ್‌ಗೆ ಬೆಂಬಲ ನೀಡಿದೆ ಎಂದು ತಿಳಿಸಿದರು.

ಕ್ರಿಕೆಟ್ ಮೂಲಕ ಸಮುದಾಯದಲ್ಲಿ ಸ್ನೇಹಭಾವ, ಒಗ್ಗಟ್ಟು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು. ವಿರಾಜಪೇಟೆ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್ ಮಾತನಾಡಿ, ಕ್ರಿಶ್ಚಿಯನ್ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಕೊಡಗು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್  ಪ್ರೀಮಿಯರ್ ಲೀಗ್ ಕ್ರೀಡಾ ಸ್ಪೂರ್ತಿಯ ಜೊತೆಗೆ ಸಹೋದರತ್ವ ಮತ್ತು ಶಿಸ್ತು ಬೆಳೆಸುವ ಉತ್ತಮ ಪ್ರಯತ್ನವಾಗಿದೆ ಎಂದು ಶ್ಲಾಘಿಸಿದರು.

 ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಕ್ರೀಡೆಯ ಮೂಲಕ ಯುವಕರನ್ನು ಸಮಾಜಮುಖಿಯಾಗಿ ರೂಪಿಸುವ ಉದ್ದೇಶದಿಂದ ಆರಂಭವಾದ ಸಿಪಿಎಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ CB9 ಉಪಾಧ್ಯಕ್ಷ ಟೋಮಿ ಥಾಮಸ್, ಸಿಪಿಎಲ್ ಅಧ್ಯಕ್ಷ ಜಿಜೋ, ಸಂತ ಜೋಸೆಫ್ ಸೇವಾ ಸಂಘ ಉಪಾಧ್ಯಕ್ಷ ಜೋಷಿ, ಅನುಭವ್ ಕನ್‌ಸ್ಟ್ರಕ್ಷನ್ ವಿಜೇಶ್, ಸೂರ್ಯವರ್ಷಿ ಅಸೋಸಿಯೇಟ್ಸ್ ಜಾನ್ಸನ್, ಟಿ.ಪಿ. ಕನ್‌ಸ್ಟ್ರಕ್ಷನ್ ಅನೀಶ್, ಸಂತ ಜೋಸೆಫ್ ಸೇವಾ ಸಂಘ ಸದಸ್ಯರಾದ ಶಾಜಿ, ವಿನ್ಸಿ, ಜಾನಿ, ರೀಗಲ್ ಹಾಗೂ ಎಸ್‌ಜೆಸಿ ಕ್ರಿಕೆಟರ್ಸ್‌ನ ಯುವಕರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0