ಕೆವಿಜಿ ಐಟಿಐ ಭಾಗಮಂಡಲದಲ್ಲಿ ಕ್ಯಾಂಪಸ್ ಸಂದರ್ಶನ

ಕೆವಿಜಿ ಐಟಿಐ ಭಾಗಮಂಡಲದಲ್ಲಿ ಕ್ಯಾಂಪಸ್ ಸಂದರ್ಶನ

ಮಡಿಕೇರಿ; ಕರ್ನಾಟಕದ ಪ್ರಸಿದ್ಧ ಆಟೋಮೊಬೈಲ್ ಡೀಲರ್ ಗಳಲ್ಲಿ ಒಂದಾಗಿರುವಂತಹ Trident group ವತಿಯಿಂದ Bharath Benzಗೆ ಕೆವಿಜಿ ಕೈಗಾರಿಕೆ ತರಬೇತಿ ಸಂಸ್ಥೆ ಭಾಗಮಂಡಲದಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಿತು. ಸಂಸ್ಥೆಯ ದ್ವಿತೀಯ ವರ್ಷದ ಎಂ.ಎಂ.ವಿ ವೃತ್ತಿ ವಿಭಾಗದವರಿಗೆ ನಡೆದ ಈ ಕ್ಯಾಂಪಸ್ ಸಂದರ್ಶನದಲ್ಲಿ ಕಂಪನಿಯ ಹೆಚ್. ಆರ್ .ಶ್ರೀ ಕಮಲಾಕರ್ ಇವರು ಕಂಪನಿಯ ಕುರಿತು ಮತ್ತು ಉದ್ಯೋಗಿಗಳಿಗೆ ಕೊಡುವ ಸೌಲಭ್ಯದ / ಅವಕಾಶದ ಬಗ್ಗೆ ವಿವರಿಸಿ ದರು . ಭಾರತ್ ಬೆಂಜ್ ಮೈಸೂರು ಶಾಖೆಯ ವರ್ಕ್ಸ್ ಮ್ಯಾನೇಜರ್ ಶ್ರೀ ಶಿವಕುಮಾರ್ ಇವರು ಉದ್ಯೋಗಿಗಳಿಗೆ ಸಂಸ್ಥೆಯಲ್ಲಿರುವಂತ ಅವಕಾಶಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಎಚ್ ಆರ್ ಶ್ರೀಯುತ ಎಬಿನ್ ಉಪಸ್ಥಿತರಿದ್ದರು ಕೆವಿಜಿ ಐಟಿಐ ಸುಳ್ಯ ಮತ್ತು ನಿಂತಿ ಕಲ್ ಐಟಿಐ ವಿದ್ಯಾರ್ಥಿಗಳು ಈ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಿದ್ದರು. ಎಂ.ಎಂ.ವಿ ವೃತ್ತಿ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಶ್ರೀ ಪುನೀತ್ ಕುಮಾರ್ ಇವರು ಕಾರ್ಯಕ್ರಮ ಆಯೋಜಿಸಿದರು. ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದರು.