Kodagu

ಕೆನರಾ ಬ್ಯಾಂಕ್‌ನಿಂದ ಸ್ವಾತಂತ್ರ್ಯೋತ್ಸವ ಆಚರಣೆ: ಮಾಜಿ ಸೈನಿಕರಿಗೆ ಸನ್ಮಾನ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ

admincoorgdaily

ಕೆನರಾ ಬ್ಯಾಂಕ್‌ನಿಂದ ಸ್ವಾತಂತ್ರ್ಯೋತ್ಸವ ಆಚರಣೆ: ಮಾಜಿ ಸೈನಿಕರಿಗೆ ಸನ್ಮಾನ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ

ವಿರಾಜಪೇಟೆ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ದೇಶಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಸನ್ಮಾನ ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿ ಮಾಜಿ ಸೈನಿಕರಿಗೆ ಗೌರವ ಸೂಚಿಸಿದರು.

  ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಆಶಿಶ್ ಅವರು, "ಬ್ಯಾಂಕಿನ 'ಸಾಮಾಜಿಕ ಜವಾಬ್ದಾರಿ' ಯೋಜನೆಯಡಿ ಮತ್ತು ಮುಖ್ಯ ಕಚೇರಿಯ ನಿರ್ದೇಶನದಂತೆ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರ ಭಾಗವಾಗಿ ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ತಲಾ 5,000 ಹಾಗೂ ಪ್ರಾಥಮಿಕ ಶಾಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ವ್ಯಾಸಂಗಕ್ಕಾಗಿ ತಲಾ 3,000 ಪುರಸ್ಕಾರ ನೀಡಲಾಗುತ್ತಿದೆ. ಜೊತೆಗೆ ದೇಶ ಕಾಯ್ದು ನಿವೃತ್ತರಾದ ಮಾಜಿ ಯೋಧರನ್ನು ಸ್ವಾತಂತ್ರ್ಯೋತ್ಸ ಸಂದರ್ಭದಲ್ಲಿ ಗೌರವಿಸುತ್ತಿರುವುದು ನಮಗೆ ಅತ್ಯಂತ ಸಂತಸದ ವಿಷಯ ಎಂದು ಹೇಳಿದರು.

   ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, "ಮಾಜಿ ಯೋಧರ ಸೇವೆಯನ್ನು ಸ್ಮರಿಸಿ ಗೌರವಿಸುತ್ತಿರುವ ಕೆನರಾ ಬ್ಯಾಂಕ್‌ನ ಕಾರ್ಯ, ಸಾಮಾಜಿಕ ಕಾಳಜಿ ನಿಜಕ್ಕೂ ಶ್ಲಾಘನೀಯ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಈ ಬ್ಯಾಂಕ್‌ನಿಂದ ಇಂತಹ ಸಾಮಾಜಿಕ ಸೇವೆಯ ಕಾರ್ಯಗಳು ಮುಂದೆಯೂ ನಿರಂತರವಾಗಿ ನಡೆಯಲಿ" ಎಂದು ಹಾರೈಸಿದರು. ಕೆನರಾ ಬ್ಯಾಂಕ್ ಸೈಅಪನೆಯಾಗಿ ದೇಶ, ವಿದೇಶಗಳಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದ್ದರ ಬಗ್ಗೆ ಈ ಸಂದರ್ಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆನರಾ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕರಾದ ಪಾರ್ಥಿಭನ್ ಎಸ್, ಅವರು ನಿವೃತ್ತ ಸೈನಿಕರಿಗಾಗಿ ನೂತನ ಯೋಜನೆಗಳ ಮಾಹಿತಿ ನೀಡಿ ಸೈನಿಕರಿಗೆ ಶುಭ ಹಾರೈಸಿದರು.

 ಸಹಾಯಕ ವ್ಯವಸ್ಥಾಪಕರಾದ ಟಿಂಟೋ ಜೆ. ವಿಲ್ಸನ್ ಅವರು ನಿವೃತ್ತ ಸೈನಿಕರಿಗಾಗಿಯೇ ಬ್ಯಾಂಕ್‌ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ 'ಭವಿಷ್ಯ ನಿಧಿ' ಸೇರಿದಂತೆ ವಿವಿಧ ವಿಶೇಷ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.

   ಈ ಸಂದರ್ಭ ಅಧ್ಯಕ್ಷರಾದ ಚಪ್ಪಂಡ ಹರೀಶ್, ಕಾರ್ಯದರ್ಶಿ ಪುಗ್ಗೇರ ನಂದ, ಖಜಾಂಚಿ ತೋರೇರ ಪೂವಯ್ಯ, ನಿರ್ದೇಶಕರಾದ ಚೇಂದ್ರಿಮಾಡ ಗಣೇಶ್ ನಂಜಪ್ಪ ಕೆ. ಭೀಮಯ್ಯ, ಸಲಾಂ ಎಂ.ಕೆ. ಕಡಂಗ, ಕಬ್ಬಚ್ಚಿರ ರತ್ನ, ಅಣ್ಣಳಮಾಡ ಸುಬ್ಬಯ್ಯ, ಬಾಳೆಕುಟ್ಟಿರ ದಿನಿ ಬೋಪಯ್ಯ, ಎಚ್.ಕೆ. ಅಪ್ಪಯ್ಯ, ವಾಸು ಪಿ.ಟಿ. ಪುಟ್ಟಿಚಂಡ ಮಧು ಮಾದಪ್ಪ, ಪಟ್ರಪಂಡ ಸೋಮೇಶ್ ಅವರನ್ನು ಸನ್ಮಾನಿಸಲಾಯಿತು.

  ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಪ್ರತಿಭಾವಂತ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಕೆನರಾ ಬ್ಯಾಂಕ್‌ನ ಸಿಬ್ಬಂದಿ ವರ್ಗದವರು ಹಾಜರಿದ್ದರು.