ಪೊನ್ನಂಪೇಟೆ: ವಾಯು ವಿಹಾರಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾರು ಡಿಕ್ಕಿ:ಮೃತಪಟ್ಟ 85ರ ಪ್ರಾಯದ ವ್ಯಕ್ತಿ

Nov 24, 2025 - 20:33
 0  969
ಪೊನ್ನಂಪೇಟೆ: ವಾಯು ವಿಹಾರಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾರು ಡಿಕ್ಕಿ:ಮೃತಪಟ್ಟ 85ರ ಪ್ರಾಯದ ವ್ಯಕ್ತಿ
ಮೃತಪಟ್ಟ ವ್ಯಕ್ತಿ

ಗೋಣಿಕೊಪ್ಪ:ವಾಯು ವಿಹಾರಕ್ಕೆ ಎಂದು ತೆರಳುತ್ತಿದ್ದ ಸಂದರ್ಭ ವ್ಯಾಗನಾರ್ ಕಾರು ಒಂದು ಡಿಕ್ಕಿ ಪಡಿಸಿದ ಪರಿಣಾಮಾ ವ್ಯಕ್ತಿ ಒಬ್ಬರು ಸಾವಿಗೀಡಾದ ಘಟನೆ ಇಂದು ಸಂಜೆ ಕಿರುಗೂರು ಗ್ರಾಮದಲ್ಲಿ ನಡೆದಿದೆ.

 ಅಲ್ಲಿನ ನಿವಾಸಿ ಕಾಯಮಾಡ ಡಾಲಿ ಮಾಚಯ್ಯ (85) ಸಂಜೆ 5 45ರ ಸಮಯದಲ್ಲಿ ವಾಯು ವಿಹಾರಕ್ಕೆ ಕಿರುಗೂರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಾಗನಾರ್ ಕಾರು ಡಿಕ್ಕಿಪಡಿಸಿದ ಪರಿಣಾಮ ರಸ್ತೆ ಮಧ್ಯದಲ್ಲಿ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಕುಟುಂಬಸ್ಥರಿಗೆ ಮಾಹಿತಿ ನೀಡಿ ಗಾಯಾಳುವನ್ನು ಕೂಡಲೇ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದಾಗ ಮಾರ್ಗ ಮಧ್ಯದಲ್ಲಿ ಕೊನೆ ಉಸಿರು ಎಳೆದಿದ್ದಾರೆ ಎಂದು ಹೇಳಲಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 4
Wow Wow 0