Kodagu

ಮಡಿಕೇರಿ ದಸರಾ ವೇದಿಕೆಯಲ್ಲಿ ಸಾಮಗ್ರಿಗಳಿಗೆ ಹಾನಿ ಪಡಿಸಿದ ಮೂವರ ವಿರುದ್ಧ ಪ್ರಕರಣ ದಾಖಲು

admincoorgdaily

ಮಡಿಕೇರಿ: ದಸರಾ ಕಲಾ ವೇದಿಕೆಯಲ್ಲಿ ಬಹುಮಾನ ವಿತರಣೆ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿ ವೇದಿಕೆ ಏರಿ "ಮೋಸ.. ಮೋಸ" ಎಂದು ಘೋಷಣೆ ಕೂಗಿ ಅಲ್ಲಿದ್ದ ಪೊಡಿಯಮ್, ಎಲ್.ಇ.ಡಿ, ಧ್ವನಿವರ್ಧಕ, ಲೈಟ್ಗಳನ್ನು ಹೊಡೆದು ಹಾಕಿ ಹಾಗೆ ಬಹುಮಾನಕ್ಕೆ ಇಟ್ಟ ಚಿನ್ನ ಹಾಗೂ ಬೆಳ್ಳಿಯ ಬಹುಮಾನಗಳನ್ನು ವೇದಿಕೆಯಿಂದ ಕೆಳಗೆ ಬಿಸಾಕಿ, ಕುರ್ಚಿಗಳನ್ನು ಹಾನಿಪಡಿಸಿ ಲಕ್ಷಕ್ಕೂ ಅಧಿಕ ರೂಪಾಯಿ ಎಷ್ಟು ನಷ್ಟ ಪಡಿಸಿರುವ ಹಿನ್ನೆಲೆಯಲ್ಲಿ ಪವನ್ ಕುಮಾರ್ ಕೆ.ಆರ್, ವಿನೋದ್ ಕಾರ್ಯಪ್ಪ ಸುಹಾಸ್ ಶೆಟ್ಟಿ, ಮೇಲೆ ಪೊಲೀಸರು ಬಿ.ಎನ್ ಎಸ್ 292, 324 (5)189(2) ರ ಅಡಿಯಲ್ಲಿ ಮೊಕದಮೆ ದಾಖಲು ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಇತರರನ್ನು ಕೂಡ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ .