ಜಾತಿಗಣತಿ: ಕೊಡಗು ಜಿಲ್ಲೆಯಲ್ಲಿ ಎಷ್ಟು ಮಂದಿಯ ಸಮೀಕ್ಷೆ ಆಗಿದೆ ಗೊತ್ತೇ!?

ಜಾತಿಗಣತಿ: ಕೊಡಗು ಜಿಲ್ಲೆಯಲ್ಲಿ ಎಷ್ಟು ಮಂದಿಯ ಸಮೀಕ್ಷೆ ಆಗಿದೆ ಗೊತ್ತೇ!?

ಜಾತಿಗಣತಿ ಜಿಲ್ಲೆಯಲ್ಲಿ ಶೇ87 ರಷ್ಟು ಸಾಧನೆ ಮಡಿಕೇರಿ: ರಾಜ್ಯಾದ್ಯಂತ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯು ಕೊಡಗು ಜಿಲ್ಲೆಯಲ್ಲಿ ಶೇ.87.48 ರಷ್ಟು ಗುರಿ ಸಾಧನೆ ಆಗಿದೆ.

 ಜಿಲ್ಲೆಯಾದ್ಯಂತ ಅಂದಾಜಿಲಾಗಿರುವ ಒಟ್ಟು 5 ಲಕ್ಷ 62 ಸಾವಿರ 969 ಜನಸಂಖ್ಯೆಯಲ್ಲಿ ಒಟ್ಟು 4 ಲಕ್ಷ 92 ಸಾವಿರ 522 ಮಂದಿಯ ಸಮೀಕ್ಷೆ ಪೂರ್ಣಗೊಂಡಿದ್ದಾಗಿ ಪ್ರಕಟಣೆ ತಿಳಿಸಿದೆ. ಈ ಮೂಲಕ ಶೇ.87.46 ಸಾಧನೆ ಆಗಿದೆ.ಅಕ್ಟೋಬರ್ 31ರವರೆಗೆ ಸಮೀಕ್ಷೆ ‌ನಡೆಯಲಿದೆ‌.

 ಕುಶಾಲನಗರ ತಾಲೂಕಿನಲ್ಲಿ 31,349 ಮನೆಗಳ 1,08,597 ಮಂದಿಯ ಸಮೀಕ್ಷೆ ನಡೆಸಲಾಗಿದೆ. ಮಡಿಕೇರಿ ತಾಲೂಕಿನ 36,076 ಮನೆಗಳ 1,27,956 ಮಂದಿ, ಪೊನ್ನಂಪೇಟೆ ತಾಲೂಕಿನ 21,333 ಮನೆಗಳ 64,110 ಮಂದಿ, ಸೋಮವಾರಪೇಟೆ ತಾಲೂಕಿನ 29,940 ಮನೆಗಳ 98,638 ಮಂದಿ ಹಾಗೂ ವೀರಾಜಪೇಟೆ ತಾಲೂಕಿನ 29,133 ಮನೆಗಳ 93,221 ಜನರ ಸಮೀಕ್ಷೆಯನ್ನು ಪೂರೈಸಲಾಗಿದೆ. ಒಟ್ಟು ಜಿಲ್ಲೆಯ 1,47,831 ನಿವಾಸಗಳ 4,92,522 ಸಾರ್ವಜನಿಕರ ಸಮೀಕ್ಷೆ ಇದುವರೆಗೆ ಪೂರೈಸಲಾಗಿದೆ.