State News

ರಾಜ್ಯದಲ್ಲಿ ವೇಗ ಪಡೆದ ಜಾತಿಗಣತಿ ಸಮೀಕ್ಷೆ: ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಗೊತ್ತೇ!

admincoorgdaily

ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಇಲ್ಲಿಯವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 12,87,087 ಕುಟುಂಬಗಳ ಸಮೀಕ್ಷೆಯು ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.

ಕೊಡಗು ಜಿಲ್ಲೆಯಲ್ಲಿ ಶನಿವಾರ ಸಂಜೆಯವರೆಗೆ 15,686 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.

ಒಟ್ಟು 1,43,77,978 ಕುಟುಂಬಗಳ ಸಮೀಕ್ಷೆಯ ಗುರಿಯನ್ನು ಇಟ್ಟುಕೊಳ್ಳಾಗಿದೆ. ಈಗ 12,87,087 ಕುಟುಂಬಗಳ ಸಮೀಕ್ಷೆ ನಡೆದಿದೆ. ಶನಿವಾರ ಒಂದೇ ದಿನ 8,18,964 ಕುಟುಂಬ ಸಮೀಕ್ಷೆ ನಡೆದಿದೆ. ಪ್ರತಿನಿತ್ಯ 11,85,637 ಕುಟುಂಬ ಸಮೀಕ್ಷೆಯನ್ನು ನಡೆಸಬೇಕು ಎಂದು ಸರಕಾರ ಗುರಿಯನ್ನು ನಿಗದಿಪಡಿಸಿದೆ.