ದಾಖಲೆಗಳಿಂದಲೇ ಸಿಕ್ಕಿಬಿದ್ದರು: ಮಡಿಕೇರಿಯಲ್ಲಿ ಕಸ ಎಸೆದವರಿಗೆ ದಂಡ
admincoorgdaily

ಮಡಿಕೇರಿ:ನಗರವನ್ನು ಕೊಳಕು ಮಾಡುವವರ ವಿರುದ್ಧ ನಗರಸಭೆ ಮತ್ತೊಮ್ಮೆ ಕಠಿಣ ಕ್ರಮ ಕೈಗೊಂಡಿದೆ. ಪಂಪ್ ಕೆರೆ ಸಮೀಪ ಮನೆಯ ತ್ಯಾಜ್ಯ ಎಸೆದ ವ್ಯಕ್ತಿಗೆ ಸ್ಥಳದಲ್ಲೇ ದಂಡ ವಿಧಿಸಿ, ಕಸವನ್ನು ತೆರವುಗೊಳಿಸಲಾಗಿದೆ.
ಮಡಿಕೇರಿ ನಗರದ ಪಂಪ್ ಕೆರೆ ಸಮೀಪ ಇಸಾಕ್ ಎಂಬುವವರು ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆ ಬದಿ ಹಾಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೊಡಗು ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು. ವೇದಿಕೆ ಅಧ್ಯಕ್ಷ ರವಿಗೌಡ,ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಅಕ್ಷಿತ್, ಬಾಲಕೃಷ್ಣ ನಾಯಕ್ ಮತ್ತು ಮಾಧ್ಯಮ ವರದಿಗಾರರಾದ ಜಾನ್ಸನ್ ಪ್ರವೀಣ್ಅವರು ಕಸವನ್ನು ಪರಿಶೀಲಿಸಿದರು.
ಕಸದ ರಾಶಿಯಲ್ಲಿ ಇಸಾಕ್ ಅವರ ವಿದ್ಯುತ್ ಬಿಲ್ ಮತ್ತು ಇನ್ನೂ ಹಲವು ದಾಖಲೆಗಳು ಸಿಕ್ಕಿವೆ. ವಿದ್ಯುತ್ ಬಿಲ್ಲಿನಿಂದ ಅವರ ಸಂಪೂರ್ಣ ಮಾಹಿತಿ ಪಡೆದುಕೊಂಡು ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಸ್ಥಳಕ್ಕೆ ಬಂದ ನಗರಸಭಾ ಸಿಬ್ಬಂದಿಗಳಾದ ರಂಗಪ್ಪ, ಭೂತರಾಜ್ ಮತ್ತು ಇತರರು ಇಸಾಕ್ ಅವರಿಗೆ ಸ್ಥಳದಲ್ಲೇ ದಂಡ ವಿಧಿಸಿದರು. ಜೊತೆಗೆ ಕಸವನ್ನು ಅವರ ಗಾಡಿಯಲ್ಲೇ ತರಿಸಿ ತೆರವು ಮಾಡಿಸಲಾಯಿತು.