ಪೊನ್ನಂಪೇಟೆಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ
admincoorgdaily

ಪೊನ್ನಂಪೇಟೆ, ಸೆ. 5: ಪೊನ್ನಂಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಿಲಾದ್ ರ‍್ಯಾಲಿ ನಡೆಸಲಾಯಿತು. ಶಾಫಿ ಜುಮಾ ಮಸೀದಿಯಿಂದ ಪ್ರಾರಂಭವಾದ ರ‍್ಯಾಲಿ, ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಸಾಗಿತು.
ಧರ್ಮಗುರು ಸೂಫಿ ದಾರಿಮಿ ಅವರು ಪ್ರಾರ್ಥನೆಯೊಂದಿಗೆ ರ‍್ಯಾಲಿಗೆ ಚಾಲನೆ ನೀಡಿದರು. ರ‍್ಯಾಲಿಯಲ್ಲಿ ನೂರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ರಸ್ತೆಯುದ್ದಕ್ಕೂ ಮದರಸ ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕುತ್ತಾ ಸಾಗಿದ್ದು ವಿಶೇಷವಾಗಿತ್ತು. ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ದಫ್ ಪ್ರದರ್ಶನ, ಫ್ಲವರ್ ಡ್ಯಾನ್ಸ್, ಹಳೆ ವಿದ್ಯಾರ್ಥಿಗಳ ಸ್ಕೌಟ್ ಮತ್ತು ದಫ್ ಪ್ರದರ್ಶನ ಆಕರ್ಷಣೀಯವಾಗಿತ್ತು.
ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವೀಕ್ಷಿಸಿದರು. ಶಾಫಿ ಜುಮಾ ಮಸೀದಿ ಅಧ್ಯಕ್ಷ ಸಿ.ಎ. ಅಹಮದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಜೀಜ್ ಪಿ.ಎ, ಉಪಾಧ್ಯಕ್ಷ ಸಿ.ಎಂ. ಅಶ್ರಫ್, ಖಜಾಂಚಿ ಕೆ. ಮಹಮ್ಮದ್ ಹಾಜಿ, ಆಡಳಿತ ಮಂಡಳಿ ಸದಸ್ಯರು, ಮಿಲಾದ್ ಕಮಿಟಿ ಅಧ್ಯಕ್ಷ ಮಹಮ್ಮದ್ ಅಲಿ ವಿ.ಹೆಚ್, ಸಂಚಾಲಕ ಜುನೈದ್ ಸಿ.ಎ, ಖಜಾಂಚಿ ಸಾಜಿರ್ ಸಿ.ಎ, ಕಮಿಟಿ ಸದಸ್ಯರಾದ ಅಶ್ರಫ್ ಎಂ.ಎಸ್, ಮಹಮ್ಮದ್ ಅಲಿ, ಅಶ್ರಫ್ ಎಂ.ಎ, ಫೈಜಲ್ ಕೆ.ಎಂ, ರಾಫೀಕ್ ಕೆ.ಎಂ, ಇರ್ಷಾದ್ ಪಿ.ಎಂ ಮೊದಲಾದವರು ಹಾಜರಿದ್ದರು.