ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಚಾರ್ಜ್‌ಶೀಟ್‌: ಹಲವಾರು ಮಹಿಳೆಯರೊಂದಿಗೂ ಕಾಮಯೋಗ!

Nov 10, 2025 - 11:00
 0  805
ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಚಾರ್ಜ್‌ಶೀಟ್‌:   ಹಲವಾರು ಮಹಿಳೆಯರೊಂದಿಗೂ ಕಾಮಯೋಗ!
Photo credit: Asaint news

ಬೆಂಗಳೂರು: ಯೋಗ ಕಲಿಯಲು ಬಂದಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಪೊಕ್ಸೊ (POCSO) ಕಾಯ್ದೆಯಡಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಪೊಕ್ಸೊ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ತನಿಖೆಯ ವೇಳೆ ನಿರಂಜನ್ ಮೂರ್ತಿ ವಿದ್ಯಾರ್ಥಿನಿಯೊಂದಿಗೆ ಅಷ್ಟೇ ಅಲ್ಲದೆ ಇನ್ನೂ ಹಲವು ಮಹಿಳೆಯರ ಮೇಲೂ ಲೈಂಗಿಕ ಕೃತ್ಯಗಳಲ್ಲಿ ತೊಡಗಿದ್ದಾನೆಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕೆಲವು ಮಹಿಳೆಯರೊಂದಿಗೆ ನಡೆಸಿದ ಅಸಭ್ಯ ಕೃತ್ಯಗಳ ವೀಡಿಯೊಗಳು ಮತ್ತು ಫೋಟೋಗಳು ತನಿಖಾಧಿಕಾರಿಗಳಿಗೆ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಹಲವಾರು ಮಹಿಳೆಯರು ಕಿರುಕುಳಕ್ಕೆ ಒಳಗಾಗಿದ್ದರೂ ದೂರು ನೀಡಲು ಮುಂದೆ ಬರುತ್ತಿಲ್ಲ. ಪೊಲೀಸರು ಸ್ವತಃ ಸಂತ್ರಸ್ತರ ಮನೆಗೆ ತೆರಳಿ ಹೇಳಿಕೆ ಪಡೆಯಲು ಯತ್ನಿಸಿದರೂ, ಬಹುತೇಕರು ಮಾತನಾಡಲು ನಿರಾಕರಿಸಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಹೇಳಿಕೆ ಮತ್ತು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ.

ಸದ್ಯ ಎಫ್‌ಎಸ್ಎಲ್‌ನಿಂದ (FSL) DNA ವರದಿ ಬಾಕಿಯಿದ್ದು, ಅದು ಬಂದ ಬಳಿಕ ಅಂತಿಮ ವರದಿ ಸಲ್ಲಿಸಲಾಗುತ್ತದೆ ಎಂದು ತನಿಖಾ ಮೂಲಗಳು ತಿಳಿಸಿವೆ.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 2
Sad Sad 0
Wow Wow 1