ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದೊಂದಿಗೆ ವಿವಿಧ ಕಾರ್ಯಕ್ರಮ

Apr 7, 2026 - 16:55
 0  127
ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದೊಂದಿಗೆ ವಿವಿಧ ಕಾರ್ಯಕ್ರಮ

ಮಡಿಕೇರಿ: ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದೊಂದಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬದ ಹಾಕಿ ಹಬ್ಬ ಸಮಿತಿ ಸದಸ್ಯ ಅಜಿತ್ ಪೂಣಚ್ಚ ತಿಳಿಸಿದ್ದಾರೆ.

ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಅಂಗವಾಗಿ ಏ.೧೨ರಂದು ಕಾಫಿ ಕೃಷಿ ಸಂಬಂಧಿತ ಮಾಹಿತಿ ಕಾರ್ಯಾಗಾರ ಹಾಗೂ ಏ.೧೯ರಂದು ಜೇನು ಕೃಷಿ ತರಬೇತಿ ಕಾರ್ಯಾಗಾರ, ಕೊಡವ ಕುಟುಂಬಗಳ ಮಧ್ಯೆ ೧೦೦+೪ ರಿಲೇ, ಮ್ಯಾರಾಥಾನ್, ಶ್ವಾನ ಪ್ರದರ್ಶನ, ಕೊಡವ ಸಾಂಸ್ಕೃತಿಕ ಕಲಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಚೇನಂಡ ಕುಟುಂಬದ ಹಾಕಿ ಹಬ್ಬ ಸಮಿತಿ ಕಾರ್ಯದರ್ಶಿ ಮಧುಮಾದಯ್ಯ ಮಾತನಾಡಿ, ನಾಪೋಕ್ಲು ಕೊಡವ ಸಮಾಜ ಸಹಯೋಗದಲ್ಲಿ ಏ.೧೦ರಂದು ಉಮ್ಮತಾಟ್, ಬಾಳೋಪಾಟ್, ಬೊಳಕಾಟ್, ಕತ್ತಿಯಾಟ್ ಸೇರಿದಂತೆ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗಿರೀಶ್ ಪೂಣಚ್ಚ, ಸುರೇಶ್ ನಾಣಯ್ಯ, ಜಪ್ಪು ದೇವಯ್ಯ ಉಪಸ್ಥಿತದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0