ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆ: 1520 ಗೋಲಿಗೆ 2200 ಗಿಡ

May 7, 2026 - 15:24
 0  280
ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆ: 1520 ಗೋಲಿಗೆ 2200 ಗಿಡ

ಚೇನಂಡ ಕಪ್ ಹಾಕಿ: 1520 ಗೋಲಿಗೆ 2200 ಗಿಡ ಮಡಿಕೇರಿ: “ಗೋಲಿಗೊಂದು ಗಿಡ” ಪರಿಕಲ್ಪನೆಯಡಿ ಚೇನಂಡ ಕಪ್ ಹಾಕಿ ಉತ್ಸವದ ಆಯೋಜಕರು ಜಿಲ್ಲೆಯಲ್ಲಿ 2200ಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ತಿಳಿಸಿದರು.

385 ಪಂದ್ಯಗಳಲ್ಲಿ 1520 ಗೋಲು ದಾಖಲಾಗಿದ್ದು, ಗುರಿ ಮೀರಿ ಗಿಡ ನೆಡಲಾಗಿದೆ. ಸೋತ ತಂಡಗಳಿಗೆ 500ಕ್ಕೂ ಹೆಚ್ಚು ಜೇನುಪೆಟ್ಟಿಗೆ ವಿತರಿಸಲಾಗಿದೆ. ಕಾಡು ಹಣ್ಣು-ಹಂಪಲು ಗಿಡ ಸಂರಕ್ಷಣೆಗೂ ಮುಂದಾಗಿದ್ದೇವೆ. 2027ರ ಅಜ್ಜಿಕುಟ್ಟೀರ ಕಪ್‌ಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ, ಪ್ರಮುಖರಾದ ತಮ್ಮಿ ತಮ್ಮಯ್ಯ, ದೀನಾ ಚಂಗಪ್ಪ, ಸುರೇಶ್ ನಾಣಯ್ಯ ಇದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0