ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ನಾಪೋಕ್ಲುವಿನಲ್ಲಿ ಚಾಲನೆ

Apr 5, 2026 - 16:59
 0  317
ಚೇನಂಡ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ನಾಪೋಕ್ಲುವಿನಲ್ಲಿ ಚಾಲನೆ

ನಾಪೋಕ್ಲು;ಇಲ್ಲಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಹಾಕಿ ಪಂದ್ಯಾವಳಿ 2026-27 ರ ಉದ್ಘಾಟನೆ ಕಾರ್ಯಕ್ರಮ ಇಂದು ನಾಪೋಕ್ಲುವಿನಲ್ಲಿ ನಡೆಯಿತು.

ಈ ಬಾರಿಯ ಕೊಡವ ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯವನ್ನು ಚೇನಂಡ ಕುಟುಂಬಸ್ಥರು ವಹಿಸಿಕೊಂಡಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಉದ್ಘಾಟಕರಾಗಿ ಆಗಮಿಸಿದರು.

ಸುಮಾರು ಒಂದು ತಿಂಗಳ ಅವಧಿಗೆ ನಿರಂತರವಾಗಿ ನಡೆಯುವ ಈ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರುತ್ತಾ ಮಾತನಾಡಿದ ಶಾಸಕರು, ನಾಡಿನಾದ್ಯಂತ ಮಾತ್ರವಲ್ಲದೆ ದೇಶ ವಿದೇಶಗಳನ್ನು ಪ್ರಸಿದ್ಧಿ ಪಡೆದಿರುವ ಹಾಗೂ ಈ ಹಿಂದೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉತ್ಸವ ಸುಸುತ್ರವಾಗಿ ನಡೆದು ಯಶಸ್ಸು ಕಾಣಲಿ ಎಂದು ಹಾರೈಸಿದರು.

ಕೊಡಗು ಜಿಲ್ಲೆ ಅದರಲ್ಲೂ ವಿಶೇಷವಾಗಿ ಕೊಡವ ಕುಟುಂಬದವರು ಸೇನೆ ಕ್ರೀಡೆ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಪ್ರಪಂಚದಾದ್ಯಂತ ಉತ್ತಮ ಹೆಸರು ಗಳಿಸಿದ್ದು, ಈ ಕೌಟುಂಬಿಕ ಪಂದ್ಯಾವಳಿಯು ಜಗತ್ತಿಗೆ ಮತ್ತಷ್ಟು ಹಾಕಿ ಪ್ರತಿಭೆಗಳನ್ನು ನೀಡುವಂತಾಗಲಿ ಎಂದು ಹಾರೈಸಿದರು.

 ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ, ವಿಧಾನ ಪರಿಷತ್ ಸದಸ್ಯರು ಸುಜಾ ಕುಶಾಲಪ್ಪ, ಪಟ್ಟೆದರ್ ಬಿ ಬೋಪಣ್ಣ, ಚೇಂನಂಡ ಹಾಕಿ ನಮ್ಮೆರ ಅಧ್ಯಕ್ಷರು ಪಿ ಕರುಂಬಯ್ಯ, ಕಾರ್ಯಧ್ಯಕ್ಷರು ಡೀನಾ ಚೆಂಗಪ್ಪ, ಸದಸ್ಯರು, ನಿರ್ದೇಶಕರು ಹಾಗೂ ಆಡಳಿತ ಮಂಡಳಿ,ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರು ಪಾಂಡಾಂಡ ಬೋಪಣ್ಣ, ಒಲಂಪಿಯನ್ ಪೂಣಚ್ಚ, ನಿರ್ದೇಶಕರು ಕಲಿಯಂಡ ಸಂಪನ್ ಅಯ್ಯಪ್ಪ, ಬಾಚಮಾಂಡ ಲವ ಚಿಣ್ಣಪ್ಪ, ಕುಶಾಲಪ್ಪ, ಅಜ್ಜಿಕುಟ್ಟಿರ ಪೊನ್ನು, ಮುತ್ತಪ್ಪ, ದಯಾ ಚಿಣ್ಣಪ್ಪ, ಮಿಥುನ್ ಮಾಚಯ್ಯ, ಸೂರಜ್ ಹೊಸೂರು,ಕುಂಡಚ್ಚಿರ ಮಂಜು ದೇವಯ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 1