ಚೆರಿಯಪರಂಬು ಮಖಾಂ ಉರೂಸ್ ಪ್ರಚಾರದ ಪೋಸ್ಟರ್ ಬಿಡುಗಡೆ

Jan 25, 2026 - 14:26
Jan 25, 2026 - 14:37
 0  301
ಚೆರಿಯಪರಂಬು ಮಖಾಂ ಉರೂಸ್ ಪ್ರಚಾರದ ಪೋಸ್ಟರ್ ಬಿಡುಗಡೆ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಚೆರಿಯಪರಂಬು ದರ್ಗಾದಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಮಹಾನುಭಾವರ ಹೆಸರಿನಲ್ಲಿ ಫೆ.6ರಿಂದ10ರ ವರೆಗೆ ನಡೆಯಲಿರುವ ವಾರ್ಷಿಕ ಉರೂಸ್ ಸಮಾರಂಭದ ಪ್ರಚಾರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ಶುಕ್ರವಾರ ಜುಮಾ ನಮಾಜಿನ ಬಳಿಕ ಚೆರಿಯಪರಂಬು ಜುಮಾಮಸೀದಿಯ ಆವರಣದಲ್ಲಿ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ಮಸೀದಿಯ ಸಹಾಯಕ ಖತೀಬರಾದ ರಫೀಕ್ ಸಖಾಫಿ ಅವರು ಉರೂಸ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.

ಈ ಸಂದರ್ಭ ಚೆರಿಯಪರಂಬು ಜಮಾಅತ್ ಅಧ್ಯಕ್ಷರಾದ ಪಿ.ಎ. ಅಹಮದ್, ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷರಾದ ಪಿ. ಎಂ.ಇಬ್ರಾಹಿಂ, ಕೋಶಾಧಿಕಾರಿ ಪಿ.ಹೆಚ್. ಬಶೀರ್, ಸಹ ಕಾರ್ಯದರ್ಶಿ ಪಿ.ಎಂ.ಆಲಿ, ಸದಸ್ಯರಾದ ಪಿ.ಎಂ.ಅಶ್ರಫ್ ಪಿ.ಎಂ. ಮೈದು ಕುಂಞಿ, ಕಲ್ಲುಮೊಟ್ಟ ಜಮಾಅತ್ ಖತೀಬರಾದ ಇಲ್ಯಾಸ್ ಸಅದಿ ಖಾಮಿಲ್ ಸಖಾಫಿ, ಜಮಾಅತ್ ಉಸ್ತಾದರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು,

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0