ಚೆಟ್ಟಳ್ಳಿ; ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ?;ಕಾಫಿ ತೋಟದಲ್ಲಿ ಕಾರ್ಮಿಕನ ಕೊಲೆ

Mar 2, 2026 - 23:36
 0  4.4k
ಚೆಟ್ಟಳ್ಳಿ; ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ?;ಕಾಫಿ ತೋಟದಲ್ಲಿ ಕಾರ್ಮಿಕನ ಕೊಲೆ
ಸಾಂದರ್ಭಿಕ ಚಿತ್ರ

ಮಡಿಕೇರಿ: ಚೆಟ್ಟಳ್ಳಿ ಸಮೀಪದ ಕಾಫಿ ಎಸ್ಟೇಟ್ ವೊಂದರಲ್ಲಿ (ಕೋಗಿನಾಲೆ) ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ಮಿಕನ ಕೊಲೆಯಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಕಳೆದ 15ಕ್ಕೂ ವರ್ಷಗಳಿಂದ ತೋಟದ ಕೆಲಸ ಮಾಡುತ್ತಿರುವ ಓರಿಸ್ಸಾ ಮೂಲದ ವ್ಯಕ್ತಿ ಕೊಲೆಯಾಗಿದ್ದಾನೆ. ಕೊಲೆ‌ ಮಾಡಿದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧದ ಕಾರಣದಿಂದಾಗಿ ಕೊಲೆ ಮಾಡಿರುವ ವಿಷಯ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಕೊಲೆ ಮಾಡಿರುವ ಆರೋಪಿ ಹಾಗೂ ಮೃತಪಟ್ಟವರ ಮಾಹಿತಿ ನಾಳೆ ಬೆಳಗ್ಗೆ ಅಪ್ಡೇಟ್ ಮಾಡಲಾಗುವುದು. ಸ್ಥಳಕ್ಕೆ ಎಸ್‌ಪಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 3
Angry Angry 0
Sad Sad 3
Wow Wow 1