Kodagu

ಚೆಟ್ಟಿಮಾನಿ:ಮಂಗೇರಿರಾ ಕುಟುಂಬಸ್ಥರು ಹಾಗೂ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

admincoorgdaily

ಚೆಟ್ಟಿಮಾನಿ:ಮಂಗೇರಿರಾ ಕುಟುಂಬಸ್ಥರು ಹಾಗೂ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಭಾಗಮಂಡಲ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಚೆಟ್ಟಿಮಾನಿ ಸಮೀಪದ ಪದಕಲ್ಲು ಗ್ರಾಮದಲ್ಲಿ ಮಂಗೇರಿರಾ ಕುಟುಂಬಸ್ಥರು ಹಾಗೂ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಭಾನುವಾರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

 ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧ ಮೇಜರ್ ಮುತ್ತಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಾವಪೂರ್ಣ ನಮನ ಅರ್ಪಿಸಲಾಯಿತು. ಇದೇ ವೇಳೆ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಎಲ್ಲ ಭಾರತೀಯ ಸೈನಿಕರಿಗೂ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕುಟುಂಬದ ಸದಸ್ಯ ಜಗದೀಶ್ ಸೋಮಯ್ಯ ಮಾತನಾಡಿ, ಮೇಜರ್ ಮುತ್ತಣ್ಣ ಅವರ ಶೌರ್ಯ, ಪರಾಕ್ರಮ ಹಾಗೂ ದೇಶಸೇವೆಯನ್ನು ಸ್ಮರಿಸಿದರು. ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಶರತ್ ಪದಕಲ್ಲು ಮಾತನಾಡಿ, "ಮೇಜರ್ ಮುತ್ತಣ್ಣ ಅವರು ನಮ್ಮ ಊರಿನವರಾಗಿರುವುದು ನಮ್ಮೆಲ್ಲರ ಹೆಮ್ಮೆ. ಅವರ ಹುಟ್ಟೂರಾದ ಪದಕಲ್ಲು ಗ್ರಾಮದಲ್ಲಿರುವ ಸ್ಮಾರಕದ ಅಭಿವೃದ್ಧಿಗೆ ಇನ್ನಷ್ಟು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕುಟುಂಬದೊಂದಿಗೆ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸಬೇಕು.

ಮುಂದಿನ ದಿನಗಳಲ್ಲಿ ಸ್ಮಾರಕ ಅಭಿವೃದ್ಧಿಯನ್ನು ಕಾರ್ಯರೂಪಕ್ಕೆ ತರಲು ಒಗ್ಗಟ್ಟಿನಿಂದ ಶ್ರಮಿಸೋಣ" ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮೇಜರ್ ಮುತ್ತಣ್ಣ ಅವರ ಸಹೋದರ ವಿಜಯ್, ಬೂತ್ ಅಧ್ಯಕ್ಷ ಪುರುಷೋತ್ತಮ್ ಪುಂಡು, ಸಹಕಾರ ಸಂಘದ ನಿರ್ದೇಶಕ ಶರತ್ ಶೆಟ್ಟಿ, ದರ್ಶನ್ ಪದಕಲ್ಲು, ನಂಗಾರು ತೇಜಸ್, ಮಾಜಿ ಸೈನಿಕ ದಿನೇಶ್, ಇತರ ಮಾಜಿ ಸೈನಿಕರು, ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. .