ಚೆಟ್ಟಿಮಾನಿ: ಪದಕಲ್ಲು ಗ್ರಾಮದಲ್ಲಿ ಚಿರತೆ ದಾಳಿ; ನಾಯಿ ಬಲಿ

Aug 18, 2026 - 23:53
 0  350
ಚೆಟ್ಟಿಮಾನಿ: ಪದಕಲ್ಲು ಗ್ರಾಮದಲ್ಲಿ ಚಿರತೆ ದಾಳಿ; ನಾಯಿ ಬಲಿ

ಮಡಿಕೇರಿ; ಚೆಟ್ಟಿಮಾನಿ-ಪದಕಲ್ಲು ಗ್ರಾಮದ ನಿವಾಸಿ ಸೇಟ್ಟಿಜನ ಗೋಪಾಲ ಅವರ ಮನೆಯ ಬಳಿ ಸೋಮವಾರ ರಾತ್ರಿ ಚಿರತೆ ದಾಳಿ ನಡೆಸಿದ್ದು, ಮನೆಯ ನಾಯಿ ಮೃತಪಟ್ಟಿದೆ.

 ಘಟನೆ ಕುರಿತು ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ತಕ್ಷಣ ಸ್ಥಳೀಯರಾದ ಶರತ್ ಪದಕಲ್ಲು ನಂಗಾರು ತೇಜಸ್ ಚಿಕ್ಕಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಚಿರತೆಯ ಚಲನ-ವಲನ ಪತ್ತೆಹಚ್ಚಲು AI ಕ್ಯಾಮೆರಾ ಸೇರಿದಂತೆ ಈಗಾಗಲೇ 4ರಿಂದ 5 ಕಡೆ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅಗತ್ಯವಿದ್ದಲ್ಲಿ ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸುವಂತೆ ಮನವಿ ಮಾಡಲಾಗಿದೆ. ಚೆಟ್ಟಿಮಾನಿ ಸುತ್ತಮುತ್ತಲಿನ 3ರಿಂದ 4 ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತಷ್ಟು ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಲಾಗಿದೆ.

ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಚಲನ-ವಲನದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಚಿರತೆ ಪ್ರತಿದಿನವೂ ತನ್ನ ಚಲನೆಯ ದಿಕ್ಕನ್ನು ಬದಲಾಯಿಸುತ್ತಿರುವುದರಿಂದ ಪತ್ತೆಹಚ್ಚಿ ಸೆರೆಹಿಡಿಯುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಚಿರತೆ ಹಾವಳಿ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0