ಕುಪ್ಪೋಡಂಡ ಎ. ರಫೀಕ್ ರವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

Mar 28, 2026 - 12:38
 0  363
ಕುಪ್ಪೋಡಂಡ ಎ. ರಫೀಕ್ ರವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ಎ.ರಫೀಕ್

ಬೆಂಗಳೂರು;ಉತ್ತಮ ಕಾರ್ಯಕ್ಷಮತೆ ತೋರಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ 2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಕರ್ನಾಟಕ ಅಪರಾಧ ತನಿಖೆ ವಿಭಾಗದ (CID) ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಕೊಡಗಿನ ಕುಪ್ಪೋಡಂಡ ಎ. ರಫೀಕ್ ರವರು‌ ಭಾಜನರಾಗಿದ್ದಾರೆ.

"ಪೊಲೀಸ್ ಧ್ವಜ ದಿನಾಚರಣೆ" (Police Flag Day) ಯ ಅಂಗವಾಗಿ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕುಪ್ಪೋಡಂಡ ಎ. ರಫೀಕ್ ರವರಿಗೆ ಈ ಪ್ರತಿಷ್ಠಿತ ಪದಕವನ್ನು ವಿತರಿಸಲಿದ್ದಾರೆ. ಕುಪ್ಪೋಡಂಡ ಎ ಎ.ರಫೀಕ್ ಅವರು ಮೂಲತಃ ಎಡಪಾಲ ಗ್ರಾಮದವರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0